ಧೋನಿ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಟೀಂ ಇಂಡಿಯಾದ ಮಾಜಿ ನಾಯಕ

ಬೆಂಗಳೂರು :

   ವೆಸ್ಟ್​ ಇಂಡೀಸ್ ಸರಣಿಯಿಂದ ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಭಾರತೀಯ ಸೇನೆಯೊಂದಿಗೆ ಕಾರ್ಯನಿರ್ವಹಿಸಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.

   ವಿಶ್ವಕಪ್​ ಮುಗಿದಾಗಿನಿಂದಲು ಧೋನಿ ನಿವೃತ್ತಿ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ವಿಶ್ವಕಪ್ ಬಳಿಕ ಧೋನಿ ಕ್ರಿಕೆಟ್​ನಿಂದ ಹಿಂದೆ ಸರಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಧೋನಿ ಇನ್ನೊಂದಿಷ್ಟು ದಿನ ಮೈದಾನದಲ್ಲಿ ಅಬ್ಬರಿಸುವ ಇಚ್ಚೆ ಹೊಂದಿದ್ದರು. ಸದ್ಯ ಧೋನಿ ನಿವೃತ್ತಿ ಬಗ್ಗೆ ಮಾಜಿ ನಾಯಕ ಸೌರವ್ ಗಂಗೂಲಿ ಮಾತನ್ನಾಡಿದ್ದಾರೆ.

  ‘ಮಹೇಂದ್ರ ಸಿಂಗ್ ಧೋನಿ ಶಾಶ್ವತವಾಗಿ ಕ್ರಿಕೆಟ್ ಆಡುವುದಿಲ್ಲ. ಭಾರತ ಕ್ರಿಕೆಟ್ ತಂಡ ಧೋನಿ ಇಲ್ಲದೇ ಮೈದಾನದಲ್ಲಿ ಕಾದಾಟ ನಡೆಸುವುದನ್ನು ಕಲಿಯಬೇಕು. ಅವರು ದೀರ್ಘ ಕಾಲದವರೆಗೆ ತಂಡದಲ್ಲಿ ಆಡುವುದಿಲ್ಲ ಎನ್ನುವ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕು’ ಎಂದು ಗಂಗೂಲಿ ಹೇಳಿದ್ದಾರೆ.

   ’38 ವರ್ಷದ ಹೊಸ್ತಿಲಲ್ಲಿರುವ ಧೋನಿ, ನಾನು ಈಗಲೂ ಮ್ಯಾಚ್ ವಿನ್ ಮಾಡುವ, ಫಿನಿಶಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದೇನೆಯೇ ಎಂಬುದನ್ನು ತಮಗೇ ಪ್ರಶ್ನೆ ಮಾಡಿಕೊಳ್ಳಬೇಕು. ಎಲ್ಲ ದಿಗ್ಗಜ ಆಟಗಾರರೂ ಒಂದಲ್ಲ ಒಂದು ದಿನ ತಮ್ಮ ಕ್ರೀಡಾ ವೃತ್ತಿಗೆ ನಿವೃತ್ತಿ ಹೇಳಲೇಬೆಕು’.  ಟೀಂ ಇಂಡಿಯಾಕ್ಕಾಗಿ ಪಂದ್ಯ ಗೆಲ್ಲಿಸಿಕೊಡುವಷ್ಟು ಸಮರ್ಥನಿದ್ದೇನೆಯೇ ಎಂಬುದರ ಬಗ್ಗೆ ಧೋನಿ ಅವರಿಗೆ ಅವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ’ ಎಂದು ಗಂಗೂಲಿ ಧೋನಿ ನಿವೃತ್ತಿ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap