ಬೆಂಗಳೂರು :
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಟೈಟಲನ್‌ನಿಂದಲೇ ಗಮನ ಸೆಳೆಯುತ್ತಿರುವ ಈ ಸಾಲಿಗೆ ಹೊಸ ಸೇರ್ಪಡೆ ದೇವರು ಬೇಕಾಗಿದ್ದಾರೆ. ಕೆಂಜ ಚೇತನ್‌ಕುಮಾರ್ ಎಂಬುವವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಚೇತನ್ ಈ ಹಿಂದೆ ಹೊಸಬರನ್ನು ಇಟ್ಟುಕೊಂಡು ಪ್ರೇಮ ಗೀಮಾ ಜಾನೇ ದೋ ಎಂಬ ಪ್ರೇಮಕಥೆಯುಳ್ಳ ಸಿನಿಮಾ ಮಾಡಿದ್ದರು. ಆ ಸಿನಿಮಾ ಮೂಲಕ ಗಮನ ಸೆಳೆದಿದ್ದ, ಅವರು ಈಗ ದೇವರು ಬೇಕಾಗಿದ್ದಾರೆ ಎಂಬ ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ಶಿವರಾಮ್ ಮತ್ತು ಅನೂಪ್ ಎಂಬ ಪುಟ್ಟ ಬಾಲಕ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಇವರ ಜತೆ ತುಮಕೂರಿನ ನಟ ಪ್ರಸಾದ್ ವಸಿಷ್ಠ, ಸತ್ಯ ಎಂಬುವವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಜುವಿನ್ ಸಿಂಗ್ ಸಂಗೀತ ನಿರ್ದೇಶನ ಮಾಡಿದ್ದಾರೆ , ರುದ್ರುಮುನಿ ಸಿನಿಮಾಟೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
