ಮಂಗಳೂರು : ಸುರತ್ಕಲ್ ಖಾಸಗಿ ಬಾರ್ ಒಂದರಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರದಿಂದು ಇರಿದು ಹತ್ಯೆ ಮಾಡಿದ ಘಟನೆ ತಡರಾತ್ರಿ ನಡೆದಿದೆ. ಗುಡ್ಡೆಕೊಪ್ಲ ನಿವಾಸಿ ಸಂದೇಶ್(30) ಎಂಬಾತ ಮೃತ ದುರ್ದೈವಿ. ಸುರತ್ಕಲ್ ಜಂಕ್ಷನ್ ಬಳಿಯಿರುವ ಖಾಸಗಿ ಬಾರ್ ಮುಂಭಾಗ ಶುಕ್ರವಾರ ರಾತ್ರಿ 11 ಗಂಟೆಗೆ ಈ ಕೃತ್ಯ ನಡೆದಿದೆ. ಹಳೆಯ ಗೆಳೆಯರ ನಡುವೆ ಉಂಟಾದ ವೈಷಮ್ಯದಿಂದ ಈ ಘಟನೆ ನಡೆದಿದೆ ಎಂಧು ಶಂಕೆ ವ್ಯಕ್ತವಾಗಿದೆ.
ಕೆಲವು ವರ್ಷಗಳ ಹಿಂದೆ ಸುರತ್ಕಲ್ ನಲ್ಲಿ ನಡೆದ ಸಂದೀಪ್ ಎಂಬುವನ ಕೊಲೆಯ ಕೇಸಿನಲ್ಲಿ ಸಂದೇಶ್ ಮತ್ತು ಮನೋಜ್ ಭಾಗಿಯಾಗಿದ್ದರು.ಜೈಲಿನಲ್ಲಿ ಬಿಡುಗಡೆಯಾದ ನಂತರ ಸಂದೀಪ್ ಮತ್ತು ಮನೋಜ್ ನಡುವೆ ಜಗಳ ನಡೆದಿತ್ತು.ಜಗಳವೇ ಕೊಲೆಗೆ ಕಾರಣವಾಯಿತು ಎನ್ನಲಾಗಿದೆ.ಸುರತ್ಕಲ್ ಜಂಕ್ಷನ್ ಬಳಿಯಿರುವ ಬಾರ್ ಮುಂಭಾಗ ಈ ಘಟನೆ ನಡೆದಿದೆ.ಗೆಳೆಯರ ನಡುವೆ ಉಂಟಾದ ಭಿನ್ನಾಭಿಪ್ರಾಯವೇ ಕೊಲೆಗೆ ಕಾರಣ ಪೊಲೀಸರು ಮಾಹಿತಿ ನೀಡಿದ್ದಾರೆ ಸದ್ಯ ಘಟನೆ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ