ಮುಂಬೈನಲ್ಲಿ ಮೂವರು ಪತ್ರಕರ್ತರಿಗೆ ಕೊರೊನಾ ಸೋಂಕು

ಮುಂಬೈ:

    ಮುಂಬೈನಲ್ಲಿ ಮೂವರು ಪತ್ರಕರ್ತರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ. ಈ ಮೂರು ಪತ್ರಕರ್ತರನ್ನು ಪೊವೈನ ಐಸೊಲೇಷನ್ ವಾರ್ಡ್​ಗೆ ಸ್ಥಳಾಂತರಿಸಲಾಗಿದೆ.

   ಮೂವರು ಪತ್ರಕರ್ತರು ಇತರ ಪತ್ರಕರ್ತರೊಂದಿಗೆ ಬಾಂದ್ರಾದ ಹೋಟೆಲ್‌ವೊಂದರಲ್ಲಿ ಉಳಿದು ದಕ್ಷಿಣ ಮುಂಬೈಯಲ್ಲಿ ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದರು. ಅವರ 37 ಸಹೋದ್ಯೋಗಿಗಳ ವರದಿ ನೆಗೆಟಿವ್ ಬಂದಿದ್ದು, 14 ದಿನ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

   ಮಹಾರಾಷ್ಟ್ರದಲ್ಲಿ ಈವರೆಗೆ 2334 ಕೋವಿಡ್-19 ಪ್ರಕರಣಗಳು ದಾಖಲಾಗಿದೆ. 160 ಜನ ಮೃತಪಟ್ಟಿದ್ದು, 229 ಜನ ಗುಣಮುಖರಾಗಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

  

Recent Articles

spot_img

Related Stories

Share via
Copy link