ಮೈಸೂರು:
ಮಾಜಿ ಸಿಎಂ ಸಿದ್ದರಾಮಯ್ಯ ಕೋಪದಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಗೆ ಎಲ್ಲರೆದುರು ಕಪಾಳಮೋಕ್ಷ ಮಾಡಿದ ಘಟನೆ ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಇಂದು ಸಿದ್ದರಾಮಯ್ಯ ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಎಚ್ಎಎಲ್ ವಿಶೇಷ ವಿಮಾನ ನಿಲ್ದಾಣದ ಮೂಲಕ ಮೈಸೂರಿಗೆ ತೆರಳಿದ್ದರು. ಈ ವೇಳೆ ಅವರು ಮಾಧ್ಯಮದ ಜೊತೆ ಮೈಸೂರಿನಲ್ಲಿ ಮಾತನಾಡಿದ್ದಾರೆ. ನಂತರ ಅವರಿಗೆ ಕಾರ್ಯಕರ್ತ ಮೊಬೈಲ್ ನೀಡಲು ಮುಂದಾಗಿದ್ದಾರೆ ಈ ವೇಳೆ ಕುಪಿತರಾದ ಸಿದ್ದು ನಾನು ಮಾತನಾಡುವುದಿಲ್ಲ ಹೋಗು ಎಂದು ಆತನ ಕೆನ್ನೆಗೆ ಬಾರಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ರವಿ ಎಂಬುವವರು ಯಾವುದೋ ವ್ಯಕ್ತಿಗೆ ಕರೆ ಮಾಡಿದ್ದರು. ಅದಾದ ನಂತರ ಹತ್ತಿರ ಬಂದ ಸಿದ್ದರಾಮಯ್ಯ ಅವರಿಗೆ ಮೊಬೈಲ್ ನೀಡಲು ರವಿ ಮುಂದಾಗಿದ್ದರು. ಅಷ್ಟೇ ಅಲ್ಲ, ದೂರವಾಣಿ ಸಂಪಕರ್ಕದಲ್ಲಿರುವವರ ಜೊತೆ ಮಾತನಾಡುವಂತೆ ಕೋರಿದ್ದರು. ‘ನಾನು ಮಾತಾನಡುವುದಿಲ್ಲ ಹೋಗ್’ ಎಂದು ಸಿದ್ದರಾಮಯ್ಯ ರವಿ ಕೆನ್ನೆಗೆ ಬಾರಿಸಿ, ಪಕ್ಕಕೆ ತಳ್ಳಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ .
#WATCH: Congress leader and Karnataka's former Chief Minister Siddaramaiah slaps his aide outside Mysuru Airport. pic.twitter.com/hhC0t5vm8Q
— ANI (@ANI) September 4, 2019
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ