ಉಡುಪಿ:
ಗೋವಾ, ಶ್ರೀಲಂಕಾದಲ್ಲಿ ಕ್ಯಾಸಿನೋಗೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಇದೇ ಮಾದರಿಯಲ್ಲಿಯೇ ರಾಜ್ಯದಲ್ಲೂ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಸಲಿವಾಗಿ ಜೂಜು ಕೇಂದ್ರವನ್ನು ಆರಂಭಿಸಲು, ಸರ್ಕಾರ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ವಿದೇಶಿಗರು ರಾಜ್ಯಕ್ಕೆ ಪ್ರವಾಸಕ್ಕೆ ಬಂದ್ರೇ, ಜೂಜಿನ ಸಲುವಾಗಿ ಗೋವಾ, ಶ್ರೀಲಂಕಾಗಳತ್ತಾ ಬರುತ್ತಿದ್ದಾರೆ. ಹೀಗಾಗಿ ರಾಜ್ಯಕ್ಕೆ ವಿದೇಶಿಗರನ್ನು ಸೆಳೆಯುವ ಮೂಲಕ, ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆ ಮುಂದಾಗಿದೆ. ಇದೇ ಕಾರಣದಿಂದಾಗಿ ರಾಜ್ಯದಲ್ಲೂ ಗೋವಾ, ಶ್ರೀಲಂಕಾ ಮಾದರಿಯಲ್ಲಿಯೇ ಕ್ಯಾಸಿನೋ ತೆರೆದು ಜೂಜು ಕೇಂದ್ರಗಳಿಗೆ ಅನುಮತಿ ನೀಡಲಿದೆ.
ಈ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಸಿ.ಟಿ.ರವಿ, ಜೂಜು ಕೇಂದ್ರ ತೆರೆಯಲು ಪ್ರವಾಸೋದ್ಯಮ ಇಲಾಖೆ ಬಂಡವಾಳ ಹೂಡುವುದಿಲ್ಲ. ಸರ್ಕಾರ ಕೇವಲ ನೀತಿ ನಿಯಮಗಳನ್ನು ಮಾತ್ರವೇ ರೂಪಿಸುತ್ತಿದೆ. ಇಂತಹ ನೀತಿ-ನಿಯಮಗಳಿಗೆ ಒಳಪಟ್ಟು ಆಸಕ್ತರು ಮುಂದೆ ಬಂದು ಸರ್ಕಾರದಿಂದ ಅನುಮತಿ ಪಡೆದು ಕ್ಯಾಸಿನೋ ಆರಂಭಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ