
ಈ ವೇಳೆ ನಿನ್ನೆಯ ಸೂರ್ಯ ಕಿರಣ ಲಘು ವಿಮಾನ ಡಿಕ್ಕಿ ಸಂಭವಿಸಿದ್ದರಿಂದ ಸಾವನ್ನಪ್ಪಿದ್ದ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಾಹಿಲ್ ಗಾಂಧಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಮಾತು ಆರಂಭಿಸಿದ್ದ ಸಿಎಂ ಕುಮಾರಸ್ವಾಮಿ, ರಕ್ಷಣಾ ವಲಯಕ್ಕೆ ಏರೋ ಇಂಡಿಯಾ ಮುಖ್ಯವಾಗಿದೆ. ಕಳೆದ ವರ್ಷ ರಾಜ್ಯದ 12 ಟ್ರಿಲಿಯನ್ ಜಿಆರ್ಡಿಪಿ ಇತ್ತು. ನಮ್ಮ ರಾಜ್ಯದಲ್ಲಿ ಆವಿಷ್ಕಾರಗಳು, ನೂತನ ಉದ್ಯಮಗಳಿಗೆ ಉತ್ತೇಜನ ನೀಡಲಾಗಿದೆ. ಅದಕ್ಕೆ ಬೇಕಾದ ಅವಶ್ಯಕ ಮೂಲಭೂತ ಸೌಕರ್ಯಗಳು ಉತ್ತಮವಾಗಿದೆ. ಹೆಚ್ಚಿನ ಜನ ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಾರೆ. ಬೆಂಗಳೂರು ಮಾತ್ರವಲ್ಲದೇ ಮೈಸೂರು, ಮಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ವೈಮಾನಿಕ ಉದ್ಯಮಕ್ಕೆ ಅವಶ್ಯವಿರುವ ತಯಾರಿಕಾ ಘಟಕಗಳಿವೆ. ಕರ್ನಾಟಕ ಸರ್ಕಾರ ಮುಂದಿನ 5 ದಿನಗಳಲ್ಲಿ 50ಕ್ಕೂ ಹೆಚ್ಚು ಬಿಟುಬಿ ಮೀಟಿಂಗ್ ಗಳನ್ನು ನಡೆಸಲಿದೆ ಎಂದರು.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಇದು ಬೆಂಗಳೂರಿಗೆ ಹೆಮ್ಮೆಯ ಸಮಾರಂಭ. ಏರೋ ಶೋದಲ್ಲಿ 600 ಭಾರತೀಯ ಕಂಪೆನಿಗಳು,400 ವಿದೇಶಿ ಕಂಪೆನಿಗಳು ಶೋದಲ್ಲಿ ಭಾಗಿಯಾಗುತ್ತಿದೆ. ಈ ಶೋ ಮೂಲಕ ವಿಶ್ವದ ದಿಗ್ಗಜರ ಸಾಲಲ್ಲಿ ಭಾರತ ನಿಂತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಏರೋ ಇಂಡಿಯಾ ಮಾರುಕಟ್ಟೆ ಬೆಳವಣಿಗೆಗೆ ವೇದಿಕೆಯಾಗಿದೆ. ಈ ಮೂಲಕ 58000 ಕೋ. ರೂ.ಗೆ ಈ ಉದ್ಯಮ ಬೆಳೆದಿದೆ. 4 ಸಾವಿರಕ್ಕೂ ಹೆಚ್ಚು ಏರ್ಕ್ರಾಫ್ಟ್ ತಯಾರಿಸಿದ್ದೇವೆ. ನೇಪಾಳ, ಇಸ್ರೇಲ್, ರಷ್ಯಾಗೆ ನಮ್ಮ ವಿಮಾನ ರಫ್ತು ಮಾಡಲಾಗಿದೆ ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








