ಹೈದ್ರಾಬಾದ್:
ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ ಸಂಬಂಧಿಸಿದ ಮಾದಾಪುರದಲ್ಲಿ ಹೈಡ್ರಾ ( ಹೈದ್ರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಮತ್ತು ಅಸೆಟ್ಸ್ ಮಾನಿಟರಿಂಗ್ ಮತ್ತು ಪ್ರೊಟೆಕ್ಷನ್) ಅಧಿಕಾರಿಗಳು ಎನ್ ಕನ್ವೆನ್ಶನ್ ಅನ್ನು ಕೆಡವುತ್ತಿದ್ದಾರೆ .ಶನಿವಾರ ಬೆಳಗ್ಗೆ ಅಧಿಕಾರಿಗಳು ಭಾರೀ ಭದ್ರತೆಯ ನಡುವೆ ಎನ್ ಕನ್ವೆನ್ಷನ್ ಸೆಂಟರ್ ಕೆಡವಲು ಆರಂಭಿಸಿದರು.
ಹೈಟೆಕ್ ಸಿಟಿ ಸಮೀಪದ ತುಮ್ಮಿಡಿಕುಂಟಾ ಹೊಂಡದಲ್ಲಿ ಮೂರೂವರೆ ಎಕರೆ ಜಾಗ ಒತ್ತುವರಿ ಮಾಡಿಕೊಂಡು ಕನ್ವೆನ್ಷನ್ ಸೆಂಟರ್ ನಿರ್ಮಿಸಲಾಗಿದೆ ಎಂಬ ದೂರುಗಳು ಕೆಲ ದಿನಗಳಿಂದ ಕೇಳಿ ಬರುತ್ತಿರುತ್ತಿದ್ದವು.ಹೈಡ್ರಾ ಇತ್ತೀಚೆಗೆ ನಗರದಲ್ಲಿ ಅಕ್ರಮವಾಗಿ ಕೆರೆಗಳ ನಿರ್ಮಾಣದಂತೆ ನಗರದಲ್ಲಿನ ಅಕ್ರಮ ನಿರ್ಮಾಣಗಳ ಮೇಲೆ ವಿಶೇಷ ಗಮನ ಹರಿಸಿದೆ.ಸರ್ಕಾರಿ ನಿವೇಶನಗಳು ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳ ಮೇಲೆ ಹೈಡ್ರಾ ಗಂಭೀರ ಕ್ರಮ ಕೈಗೊಳ್ಳಲಿದೆ. ಈ ಕ್ರಮದಲ್ಲಿ ಎನ್-ಕನ್ವೆನ್ಷನ್ ಅನ್ನು ಕೆಡವಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.