ಗಡಿ ದಾಟಿ ಬಂದಿದ್ದ ಪಾಕ್ ವಿಮಾನ ಉಡೀಸ್!!!

ದೆಹಲಿ:

      ಭಾರತದ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಭಾರತದೊಳಗೆ ನುಗ್ಗಿದ್ದ F-16 ಯುದ್ಧ ವಿಮಾನವನ್ನು ನಾಶೇರಾ ಸೆಕ್ಟರ್ ಎಂಬಲ್ಲಿ  ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

      ಇನ್ನು F-16 ಯುದ್ಧ ವಿಮಾನದ ಪೈಲಟ್ ಪ್ಯಾರಚೂಟ್ ಮುಖಾಂತರ ಕೆಳಗೆ ಜಿಗಿದಿದ್ದು, ಸದ್ಯ ಪೈಲಟ್ ನ ಹುಡುಕಾಟದಲ್ಲಿ ಭಾರತೀಯ ಸೇನೆ ನಿರತವಾಗಿದೆ. 

      ಎಲ್ ಒಸಿ ಬಳಿಯ ವಾಯುಸೀಮೆಯನ್ನು ಉಲ್ಲಂಘಿಸಿ ಪಾಕಿಸ್ತಾನದ ಮೂರು ಜೆಟ್ ವಿಮಾನಗಳು ದಾಳಿ ನಡೆಸಲು ವಿಫಲ ಪ್ರಯತ್ನ ನಡೆಸಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದ್ದು, ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap