ದೆಹಲಿ :
ಉಗ್ರರ ಗುಂಡಿನ ದಾಳಿಗೆ ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸರ್(ಜೆಸಿಒ) ಹುತಾತ್ಮರಾಗಿದ್ದಾರೆ.
ನೌಶೇರಾ ವಲಯದ ಠಾಣೆ (ಗಡಿ ನಿಯಂತ್ರಣ ರೇಖೆಯ 500 ಮೀಟರ್ ಒಳಗಡೆ) ಮೇಲೆ ಮಂಗಳವಾರ ಬೆಳಗ್ಗೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡ ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಅಧಿಕಾರಿ ಮೃತಪಟ್ಟಿದ್ದಾರೆ.
J&K: A Junior Commissioned Officer (JCO) of the Indian Army succumbed to injuries after being fired upon by terrorists at a post(500m inside the LoC) in Naushera sector earlier today. Area cordoned off, exchange of fire underway pic.twitter.com/tvEN6Wqc7W
— ANI (@ANI) October 22, 2019
ಭಯೋತ್ಪಾದಕರು ಒಳ ನುಸುಳುವಿಕೆಗೆ ಬೆಂಬಲ ನೀಡಲು ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿರುವುದಕ್ಕೆ ಪ್ರತೀಕಾರವಾಗಿ ಭದ್ರತಾ ಪಡೆ ಭಾನುವಾರ ಗಡಿ ನಿಯಂತ್ರಣ ರೇಖೆಯಲ್ಲಿರುವ ಪಾಕಿಸ್ತಾನದ ಸೇನಾ ನೆಲೆ ಹಾಗೂ ಮೂರು ಭಯೋತ್ಪಾದಕ ಶಿಬಿರಗಳನ್ನು ಪಿರಂಗಿ ಬಳಸಿ ಧ್ವಂಸಗೊಳಿಸಿತ್ತು.
#WATCH Jammu and Kashmir: 3 terrorists killed in encounter between security forces & terrorists in Awantipora today. Arms & ammunition recovered. Identities and affiliations being ascertained. Search in the area continues. pic.twitter.com/xMWn0Vl9Fl
— ANI (@ANI) October 22, 2019
ಭಾರತೀಯ ಸೇನಾ ಪಡೆಯ ಫಿರಂಗಿ ದಾಳಿಯಿಂದ ಪಾಕಿಸ್ತಾನ ಸೇನೆಯ ಕನಿಷ್ಠ 6 ಮಂದಿ ಯೋಧರು ಮೃತಪಟ್ಟಿದ್ದಾರೆ ಎಂದು ಸೇನಾ ವರಿಷ್ಠ ಬಿಪಿನ್ ರಾವತ್ ಹೇಳಿದ್ದರು. ಅನಂತರ ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ಎನ್ಕೌಂಟರ್ ಇದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ