ಅಭಿನಂದನ್ ಫೋಟೋ ಬಳಸಿದ ಪಾಕಿಸ್ತಾನ ಚಾಯ್ ವಾಲಾ!

     ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಎಫ್-16 ಹೊಡೆದುರುಳಿಸಿ ನಂತರ ಪಾಕ್ ಸೇನೆ ಕೈಗೆ ಸಿಕ್ಕಿ ಸುರಕ್ಷಿತವಾಗಿ ಭಾರತ ಮರಳಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸದ್ಯ ಭಾರತದಲ್ಲೇ ಅಲ್ಲ ಪಾಕಿಸ್ತಾನದಲ್ಲೂ ಸೆಲೆಬ್ರಿಟಿಯಾಗಿದ್ದಾರೆ.

      ಪಾಕಿಸ್ತಾನದ ಚಾಯ್ ವಾಲಾ ಒಬ್ಬರು, ಅಭಿನಂದನ್ ಚಾಯ್ ಕುಡಿಯುತ್ತಿರುವ ಫೋಟೋವನ್ನು ಬ್ಯಾನರ್ ಮಾಡಿಸಿ ತನ್ನ ಚಾಯ್ ಗಾಡಿಗೆ ಹಾಕಿಕೊಂಡು ಕಸ್ಟಮರ್‌ಗಳನ್ನು ಆಕರ್ಷಿಸುತ್ತಿದ್ದಾನೆ.

      ಫೋಟೋವನ್ನು ಬಳಸಿಕೊಂಡಿರುವ ಚಾಯ್ ವಾಲಾ ಈ ಟೀ ಕುಡಿಯುವುದರಿಂದ ‘ಐಸಿ ಚಾಯ್ ಕಿ ದುಷ್ಮನ್ ಕೋ ಬಿ ದೋಸ್ತ್ ಬನಾಯೆ’ (ಈ ಚಾಯ್ ಶತ್ರುವನ್ನು ಕೂಡಾ ಮಿತ್ರನನ್ನಾಗಿ ಬದಲಾಯಿಸುತ್ತದೆ) ಎಂದು ಉರ್ದುವಿನಲ್ಲಿ ಬರೆದಿದೆ.

      ಇದರೊಂದಿಗೆ ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜೊತೆಗೆ ಆ ಚಾಯ್‌ವಾಲನ ಬುದ್ದಿವಂತಿಕೆಗೂ ಜನರು ಅಷ್ಟೇ ಫಿದಾ ಆಗಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ