ನವದೆಹಲಿ:
ಡಿಸೆಂಬರ್ 31 ರ ಒಳಗಾಗಿ ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಈ ಹಿಂದೆ ಸೆ.30ಕ್ಕೆ ಇದ್ದ ಕಡೆಯ ದಿನಾಂಕವನ್ನು ಈ ವರ್ಷಾಂತ್ಯದವರೆಗೂ ಕೇಂದ್ರೀಯ ನೇರ ತೆರಿಗೆ ಮಂಡಳಿ ವಿಸ್ತರಿಸಿತ್ತು. ಈ ಪ್ರಕ್ರಿಯೆಗೆ ಇದುವರೆಗೆ ಒಟ್ಟಾರೆ ಏಳು ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ.
“ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ! ಆದಾಯ ತೆರಿಗೆ ಸೇವೆಗಳ ತಡೆರಹಿತ ಲಾಭವನ್ನು ಪಡೆಯಲು, 2019 ರ ಡಿಸೆಂಬರ್ 31 ರ ಮೊದಲು ಪ್ರಮುಖ ಲಿಂಕ್ ಅನ್ನು ಪೂರ್ಣಗೊಳಿಸಿ” ಎಂದು ಇಲಾಖೆ ತಿಳಿಸಿದೆ.
ಆಧಾರ್ ಸಂಖ್ಯೆ ಕಡ್ಡಾಯ ಕುರಿತ ತಕರಾರು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನೀಡಿದ ತೀರ್ಪಿನಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಸಂಖ್ಯೆ ನೀಡಬೇಕು ಮತ್ತು ಆದಾಯ ತೆರಿಗೆ ಸಲ್ಲಿಸಲು ಆಧಾರ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್ಗೆ ಜೋಡಿಸಿರಬೇಕು ಎಂದು ಸೂಚಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ