ನೀರಿಗಾಗಿ ಒತ್ತಾಯಿಸಿ ಗ್ರಾಪಂಗೆ ಮುತ್ತಿಗೆ

ಬರಗೂರು :

  ಸಿರಾ ತಾಲ್ಲೂಕು ಬರಗೂರು ಗ್ರಾಮ ಪಂಚಾಯಿತಿಯ ಹಾರೋಗೆರೆ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಾಗಿದೆ ಎಂದು ಬರಗೂರು ಗ್ರಾಮ ಪಂಚಾಯಿತಿಗೆ ಮಹಿಳೆಯರು ಮತ್ತು ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ಜರುಗಿದೆ.

   ಗ್ರಾಮದಲ್ಲಿನ ಬೋರ್‍ವೆಲ್‍ಗಳಲ್ಲಿ ನೀರು ಬರದೆ ಕುಡಿಯುವ ನೀರಿಗೆ ಅಕ್ಕಪಕ್ಕದ ಗ್ರಾಮಗಳನ್ನು ಆಶ್ರ್ರಯಿಸುವಂತಾಗಿದೆ. ಹಾರೋಗೆರೆ ಗ್ರಾಮಕ್ಕೆ ಈ ಕೊಡಲೆ ಹೊಸ ಬೋರ್ ವೆಲ್ ಕೊರೆಸಿ ಸಮರ್ಪಕವಾದ ನೀರಿನ ವ್ಯವಸ್ಥೆ ಮಾಡುವಂತೆ ಒತ್ತಾಯಿಸಲಾಗಿದೆ.

  ಈ ಸಂದರ್ಭದಲ್ಲಿ ಲಕ್ಷ್ಮಕ್ಕ, ಮಹದೇವಮ್ಮ, ಮಾರಕ್ಕ, ಆರ್.ಭಾಗ್ಯಮ್ಮ, ಮಾರಕ್ಕ, ರಾಜಮ್ಮ, ಲತಮ್ಮ, ಪುಟ್ಟರಂಗಮ್ಮ ಇತರರು ಇದ್ದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link