ಮಹಾರಾಷ್ಟ್ರ:
ಪುಲ್ವಾಮಾ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ವೀರ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ, ಭಯೋತ್ಪಾದಕರು ಮತ್ತವರ ಸಂಘಟನೆಗಳನ್ನು ರಕ್ಷಿಸುತ್ತಿರುವವರನ್ನೂ ಶಿಕ್ಷಿಸುತ್ತೇವೆ. ಎಂದು ಪ್ರಧಾನಿ ನರೇಂದ್ರ ಮೋದಿ ಶತೃರಾಷ್ಟ ಪಾಕಿಸ್ತಾನಕ್ಕೆ ಮತ್ತೆ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಯವತ್ಮಾಲ್ ಮತ್ತು ದುಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳ ಚಾಲನೆಗೆ ಆಗಮಿಸಿದ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಪುಲ್ವಾಮದಲ್ಲಿ ಯೋಧರು ಹುತಾತ್ಮರಾಗಿರುವುದಕ್ಕೆ ಎಲ್ಲರೂ ಎಷ್ಟು ನೋವು ಅನುಭವಿಸಿದ್ದೀರಿ ಹಾಗೂ ನಿಮ್ಮ ನೋವು, ಆಕ್ರೋಶ, ಅಸಮಾಧಾನ ಏನೆಂಬುದು ನಮಗೆ ಅರ್ಥವಾಗಿದೆ. ಭಯೋತ್ಪಾದಕರು ಘೋರ ಅಪರಾದ ಎಸಗಿದ್ದಾರೆ. ಭದ್ರತಾ ಪಡೆಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದು, ಉಗ್ರಗಾಮಿ ಪಡೆ ಎಲ್ಲೇ ಅಡಗಿ ಕುಳಿತಿರಲಿ ಅವರನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದಿದ್ದಾರೆ.
ತಮ್ಮ ಪ್ರಾಣ ಕಳೆದುಕೊಂಡ ಯೋಧರ ಜೀವಕ್ಕೆ ಬೆಲೆಯಿದೆ. ಅವರ ತ್ಯಾಗ ನಿರುಪಯೋಗವಾಗಲು ಬಿಡುವುದಿಲ್ಲ ಎಂದು ಹೇಳಿದರು. ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನಿ, ಪಾಕಿಸ್ತಾನಕ್ಕೆ ಪಾಕಿಸ್ತಾನವೇ ಪರ್ಯಾಯವಾಗಿದೆ. ಇಂದು ಜನರು ನೆಮ್ಮದಿಯಾಗಿ ತಮ್ಮ ಕನಸುಗಳನ್ನು ಹೊತ್ತು ಜೀವಿಸುತ್ತಿದ್ದಾರೆ ಎಂದಾದರೆ ಅದಕ್ಕೆ ಯೋಧರೇ ಕಾರಣ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
