ದೆಹಲಿ :
ಇನ್ನು ಮುಂದೆ ಸೂಪರ್ ಮಾರ್ಕೆಟ್ ಗಳಲ್ಲೂ ಕೂಡ ಪೆಟ್ರೋಲ್-ಡೀಸೆಲ್ ಸೌಲಭ್ಯ ಲಭ್ಯವಾಗಲಿದೆ.
ಹೌದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗುತ್ತಿದ್ದು, ಅವುಗಳಲ್ಲಿ ಪೆಟ್ರೋಲ್, ಡಿಸೇಲ್ ಖರೀದಿಗೆ ಸಂಬಂಧಿಸಿದಂತೆ ಮಹತ್ವದ ಯೋಜನೆ ಜಾರಿಗೆ ತರಲಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟಕ್ಕೆ ಈಗಿರುವ ನಿಯಮಗಳನ್ನು ಸಡಿಲಪಡಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನಿರ್ಧರಿಸಿದೆ. ಇದರನ್ವಯ ಸೂಪರ್ ಮಾರ್ಕೆಟ್ ಹಾಗೂ ಶಾಪಿಂಗ್ ಮಾಲ್, ವಾಣಿಜ್ಯ ಮಳಿಗೆಗಳಲ್ಲಿ ಪೆಟ್ರೋಲ್ ಮಾರಾಟ ಮಾಡಬಹುದಾಗಿದೆ.
ಈ ಮೂಲಕ ಪೆಟ್ರೋಲ್, ಡೀಸೆಲ್ ಸುಲಭವಾಗಿ ದೊರೆಯುವಂತೆ ನೋಡಿಕೊಳ್ಳಲು ಕೇಂದ್ರ ಮುಂದಾಗಿದ್ದು, ಈ ಕುರಿತು ಮನವಿಯನ್ನು ಸಚಿವ ಸಂಪುಟದ ಎದುರಿಡಲು ಸರ್ಕಾರ ನಿರ್ಧರಿಸಿದೆ.
ತೈಲ ವ್ಯಾಪಾರಕ್ಕೆ ಸಂಬಂದಪಟ್ಟ ಈಗಿನ ನಿಯಮಗಳನ್ನು ಸಡಿಲಗೊಳಿಸುವ ಸಾಧ್ಯತೆಯಿದ್ದು, ಈಗಿನ ನಿಯಮ ಬದಲಾವಣೆಯಾದರೆ ಸಾಮಾನ್ಯ ಜನರು ಸುಲಭ ಇಂಧನ ಪಡೆಯಲು ಸಾದ್ಯವಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ