ವಿಶ್ವದ ಅತಿ ಉದ್ದದ ‘ಅಟಲ್‍ ಸುರಂಗ ಮಾರ್ಗ’ ಲೋಕಾರ್ಪಣೆ!!

ನವದೆಹಲಿ :

     ಜಗತ್ತಿನ ಅತ್ಯಂತ ಉದ್ದವಾದ ಅಟಲ್ ಸುರಂಗ ಮಾರ್ಗವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ.

     ಹಿಮಾಚಲಪ್ರದೇಶದ ರೋಹ್ಟಂಗ್​ನಲ್ಲಿ ನಿರ್ಮಾಣವಾಗಿರುವ ಈ ಸುರಂಗ ಮಾರ್ಗ ಮನಾಲಿ ಮತ್ತು ಲೇಹ್ ನಡುವೆ ಸಂಪರ್ಕ ಕಲ್ಪಿಸುತ್ತದೆ.

     ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ಅವರ ಕನಸಿನ ಕೂಸಾಗಿದ್ದ ಈ ಸುರಂಗ ಮಾರ್ಗಕ್ಕೆ 2002ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಮನಾಲಿ-ಲೇಹ್ ನಡುವೆ 3300 ಕೋಟಿ ರೂ. ವೆಚ್ಚ ಮಾಡಿ ಸತತ 28 ವರ್ಷಗಳ ಕಾಲ ಶ್ರಮ ವಹಿಸಿ ನಿರ್ಮಿಸಿರುವ 9.02ಕಿ.ಮೀ. ಉದ್ದದ ಈ ಸುರಂಗ ಮಾರ್ಗಕ್ಕೆ ಅಟಲ್ ಸುರಂಗ ಮಾರ್ಗ ಎಂದು ನಾಮಕರಣ ಮಾಡಲಾಗಿದೆ.

    ಈ ಸುರಂಗ ಮಾರ್ಗ ನಿರ್ಮಾಣದಿಂದ ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು 46ಕಿ.ಮೀ.ನಷ್ಟು ತಗ್ಗಿಸುವುದರ ಜತೆಗೆ ಐದು ತಾಸುಗಳ ಅವ ಉಳಿತಾಯವಾಗಲಿದ್ದು, ಯಾವುದೇ ಹವಾಮಾನ ವೈಪರೀತ್ಯದ ಸಂದರ್ಭದಲ್ಲೂ ಸಾರ್ವಜನಿಕರು ಪ್ರಯಾಣ ಮಾಡಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap