ನವದೆಹಲಿ:
ಲಾಕ್‌ಡೌನ್‌ನಲ್ಲಿರುವ 130 ಕೋಟಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಹೊಸ ಸಂದೇಶ ನೀಡಿದ್ದು,
ಇಂದು ಬೆಳಿಗ್ಗೆ 9 ಗಂಟೆಗೆ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೋವಿಡ್ 19 ಮಹಾಮಾರಿ ವಿರುದ್ಧ ಎಲ್ಲರೂ ಹೋರಾಡಬೇಕಾಗಿದೆ. ಈ ನಿಟ್ಟಿನಲ್ಲಿ ಏಪ್ರಿಲ್ 5ರಂದು ರಾತ್ರಿ 9ಗಂಟೆಗೆ 9 ನಿಮಿಷಗಳ ಕಾಲ ಮನೆಯ ಲೈಟ್ ಅನ್ನು ಆರಿಸಿ ಮೊಂಬತ್ತಿ, ದೀಪ ಅಥವಾ ಮೊಬೈಲ್ ಫ್ಲ್ಯಾಶ್ ಲೈಟ್ ಗಳನ್ನು ಬೆಳಗುವ ಮೂಲಕ ದೇಶದ 130 ಕೋಟಿ ಭಾರತೀಯರು ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ದೇಶದಲ್ಲಿ ಲಾಕ್ ಡೌನ್ ಅನಿವಾರ್ಯ ಆಗಿದೆ. ಆದರೆ ಪ್ರತಿಯೊಬ್ಬರು ತಾವು ಒಬ್ಬಂಟಿಯಲ್ಲ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ‘ದಯವಿಟ್ಟು ಈ ಭಾನುವಾರ ನಿಮ್ಮ ಮನೆಯ ಲೈಟ್ ಗಳನ್ನು ಆರಿಸಿ, ಮೊಂಬತ್ತಿ, ದೀಪ ಅಥವಾ ಮೊಬೈಲ್ ಲೈಟ್ ಗಳನ್ನು ನಿಮ್ಮ ಮನೆಯ ಬಾಲ್ಕನಿ, ಮನೆಯ ಹೊರಗೆ 9 ನಿಮಿಷಗಳ ಕಾಲ ಬೆಳಗಿಸಿ’ ಎಂದು ಪ್ರಧಾನಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
