ಜನಪ್ರತಿನಿಧಿಗಳಿಗೆ ಸ್ಪಂದಿಸಿದ ಅಧಿಕಾರಿಗಳ ವಿರುದ್ಧ ಕ್ರಮ : ಗೃಹ ಸಚಿವ

ಬೆಂಗಳೂರು

     ದೊಡ್ಡನಕ್ಕುಂದಿ,ರಾಮಮೂರ್ತಿ ನಗರ,ಬೆಳ್ಳಂದೂರು, ಸೇರಿದಂತೆ ಹಲವೆಡೆ ವೈದ್ಯರು ಸ್ಥಳೀಯ ಪಾಲಿಕೆ ಸದಸ್ಯರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪಾಲಿಕೆ ಸದಸ್ಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಕೋವಿಡ್ ನಿಯಂತ್ರಣದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಸ್ಪಂದಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವ ಬಸವರಾಜ್ ಸೂಚಿಸಿದರು.

    ಕೋವಿಡ್ 19 ಸೊಂಕು ತಡೆ ಹಿನ್ನೆಲೆ ಇಂದು ಮಹದೇವಪುರ ವಲಯದ ಪ್ರಗತಿ ಪರಿಶೀಲನ ಸಭೆಯನ್ನು ಸಚಿವ ಬಸವರಾಜ್ ನಡೆಸಿದರು.ಸಭೆಯಲ್ಲಿ ಮಾತನಾಡಿದ ಅವರು,ಕೋವಿಡ್ 19 ಕೆಲಸದಲ್ಲಿ ಯಾವುದೇ ಅಧಿಕಾರಿಗಳು ಅಥವಾ ವೈದ್ಯರಾಗಲಿ ನಿರ್ಲಕ್ಷ ತೋರಿದರೂ ಕೂಡಲೆ ಅಮಾನತ್ತುಗೊಳಿ ಸುವಂತೆ ಉಸ್ತುವಾರಿ ಕಾರ್ಯದರ್ಶಿಗೆ ಸೂಚನೆ ನೀಡಿದರು.ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಮುಂದಿನ ಸಭೆಯಲ್ಲಿ ಸೋಂಕು ಪ್ರಮಾಣ ಕಡಿಮೆ ಮಾಡಲೇಬೇಕೆಂದು ಸೂಚನೆ ನೀಡಿದರು.

   ಕೊರೋನಾ ಸೊಂಕಿತರಾಗಲಿ,ಪ್ರಾಥಮಿಕ ಸಂಪರ್ಕಿತರು ರಸ್ತೆಗಿಳಿದರೆ ಅವರ ವಿರುದ್ದ ಕಠಿಣ ಕ್ರಮ ಜರುಗಿಸು ವಂತೆ ಪೊಲೀಸರಿಗೆ ಸೂಚನೆ ನೀಡಿದರು.ಕೋವಿಡ್ – 19 ನಿರ್ವಹಣೆಯಲ್ಲಿ ಕಳಪೆ ಪ್ರದರ್ಶನಾಮಾಡಿದ ಅಧಿಕಾರಿಗಳನ್ನು ಕೂಡಲೆ ಅಮಾನತ್ತು ಮಾಡು ವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ವಾರ್ಡ್ ಒಂದರಲ್ಲಿ ಪ್ರತಿ ದಿನ 150 ಸ್ವಾಬ್ ಟೆಸ್ಟ್ ಮಾಡಲೇ ಬೇಕೆಂದರು.

        ಮಾರತ್ ಹಳ್ಳಿ ವಾರ್ಡ್ ಪಾಲಿಕೆ ಸದಸ್ಯ ರಮೇಶ್ ಮಾತನಾಡಿ ನಮ್ಮ ವಾರ್ಡ್ ನಲ್ಲಿ ಅತಿ ಹೆಚ್ಚು ಬಡವರಿದ್ದು ಸರ್ಕಾರದಿಂದ ಸಿಗುತ್ತಿರುವ ಪಡಿತರ ದಾನ್ಯ ಸಾಕಾಗುತ್ತಿಲ್ಲ ಹಾಗಾಗಿ ಇನ್ನು ಹೆಚ್ಚು ಪಡಿತರ ವಿತರಣೆ ಮಾಡುವಂತೆ ಮನವಿ ಮಾಡಿದರು.ಬೆಳ್ಳಂದೂರು ಮತ್ತು ಹೊರಮಾವು ವಾರ್ಡ್ ನಲ್ಲಿ ಪ್ರಕರಣಗಳಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ ಕೂಡಲೆ ಕಡಿಮೆ ಆಗಲು ಶ್ರಮಿಸಬೇಕು ಎಂದು ಅವರು ಅಧಿಕಾರಿಗಳಿಗೆ,ಜನಪ್ರತಿನಿಧಿಗಳಿಗೆ ಮನವಿ ಮಾಡಿ ದರು. ಸಭೆಯಲ್ಲಿ ಐಎಎಸ್ ಅಧಿಕಾರಿ ಡಾ. ಮಂಜುಳಾ, ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್,ಡಿಸಿಪಿ ದೇವರಾಜ್, ಜಂಟಿ ಆಯುಕ್ತ ವೆಂಕಟಾಚಲಪತಿ ಭಾಗವಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link