ನವದೆಹಲಿ:

ದೇಶದಲ್ಲಿ ಮತ್ತೊಮ್ಮೆ ಲಾಕ್ಡೌನ್ ಮುಂದುವರಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ಅವರು ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತ, ಬೇರೆ ದೇಶಗಳಿಗೆ ಹೋಲಿಸಿದರೆ, ಭಾರತದ ಸ್ಥಿತಿ ಉತ್ತಮವಾಗಿದೆ ಸಮಯೋಚಿತ ನಿರ್ಧಾರಗಳು ಮತ್ತು ಕ್ರಮಗಳು ದೊಡ್ಡ ಪಾತ್ರವನ್ನು ವಹಿಸಿವೆ. ಸರಿಯಾದ ಸಮಯಕ್ಕೆ ಲಾಕ್ಡೌನ್ ಮಾಡಿದ್ದೇವೆ. ಈ ಮೂಲಕ ಲಕ್ಷಾಂತರ ಜನರ ಪ್ರಾಣ ಉಳಿಸಿದ್ದೇವೆ. ಇನ್ನು ಮುಂದೆ ಆರ್ಥಿಕ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ತಿಳಿಸಿದ ಅವರು, ದೇಶದಲ್ಲಿ ಮತ್ತೆ ಲಾಕ್ಡೌನ್ ಮುಂದುವರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವೆಲ್ಲರೂ ಲಾಕ್ಡೌನ್ ನಿಯಮ ಪಾಲಿಸಿದ್ದೇವೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಬಳಸಿದ್ದೇವೆ. ಆದರೂ ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಗ್ರತೆ ತುಂಬಾ ಅವಶ್ಯಕವಾಗಿದೆ. ಕಂಟೈನ್ಮೆಂಟ್ ಝೋನ್ಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ ಎಂದು ಕರೆ ನೀಡಿದರು.
ಇದೇ ವೇಳೆ ಅವರು ಮಾತನಾಡುತ್ತ ‘ಪ್ರಧಾನಿ ಮಂತ್ರಿ ಅನ್ನಯೋಜನೆಯನ್ನು ನವೆಂಬರ್ ತನಕ ವಿಸ್ತರಣೆ ಮಾಡಲಾಗುವುದು ಅಂತ ಹೇಳಿದರು. ಪಿಎಂ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ನಾವು ರೂ. 1.75 ಲಕ್ಷ ಕೋಟಿ. ಕಳೆದ 3 ತಿಂಗಳಲ್ಲಿ ರೂ. 20 ಕೋಟಿ ಬಡ ಕುಟುಂಬಗಳ ಬ್ಯಾಂಕ್ ಖಾತೆಗಳಲ್ಲಿ 31,000 ಕೋಟಿ ಠೇವಣಿ ಇಡಲಾಗಿದೆ. ಅಲ್ಲದೆ, ರೂ. 9 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಲ್ಲಿ 18000 ಕೋಟಿ ಠೇವಣಿ ಇಡಲಾಗಿದೆ ಅಂತ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








