ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಖಡಕ್ ಸಂದೇಶ!!!

ಬಿಷೆಕ್:

     ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರನ್ನು ಪಾಕಿಸ್ತಾನ ಸಂಪೂರ್ಣ ದಮನ ಮಾಡದ ಹೊರತು ಈ ಹಂತದಲ್ಲಿ ಯಾವುದೇ ಮಾತುಕತೆ ಅಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

      ಕಿರ್ಗಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಶೃಂಗ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಎದುರಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಖಡಕ್ ಸಂದೇಶ ನೀಡಿದರು.

      ‘ಚೀನೀ ಅಧ್ಯಕ್ಷರ ಜೊತೆ ಪಾಕ್ ಕುರಿತ ಕೆಲವು ವಿಚಾರಗಳನ್ನು ಚರ್ಚಿಸಲಾಯಿತು. ನಮ್ಮ ನಿಲುವು ದೃಢವಾಗಿದೆ. ಪಾಕ್ ಜತೆ ಬಾಂಧವ್ಯ ಸುಧಾರಣೆಗೆ ನಾವೇ ಮೊದಲಾಗಿ ಹಲವು ಉಪಕ್ರಮಗಳನ್ನು ಕೈಗೊಂಡಿದ್ದೇವೆ. ಆದರೆ ಅವೆಲ್ಲವನ್ನೂ ಹಳಿ ತಪ್ಪಿಸಲಾಯಿತು. ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರನ್ನು ಪಾಕಿಸ್ತಾನ ಸಂಪೂರ್ಣ ದಮನ ಮಾಡದ ಹೊರತು ಈ ಹಂತದಲ್ಲಿ ಯಾವುದೇ ಮಾತುಕತೆ ಅಸಾಧ್ಯ’ ಎಂದು ಪ್ರಧಾನಿ ಸ್ಪಷ್ಟಪಡಿಸಿದರು.

     ಅಲ್ಲದೇ ಭಯೋತ್ಪಾದನೆಯನ್ನು ಯಾವೆಲ್ಲ ದೇಶಗಳು ಪೋಷಿಸುತ್ತವೋ ಆ ಎಲ್ಲ ದೇಶಗಳನ್ನೂ ಜಗತ್ತಿನ ಇತರ ದೇಶಗಳು ದೂರ ಇಡಬೇಕು ಎಂದು ಮೋದಿ ಗುಡುಗಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ