ಗುಹವಾಟಿ :
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತ್ಯಂತ ಉದ್ದದ ರೈಲು ಮತ್ತು ರಸ್ತೆ ಸೇತುವೆಯನ್ನು ಲೋಕಾರ್ಪಣೆ ಮಾಡಿದರು.
1997ರಲ್ಲಿ ಎಚ್.ಡಿ.ದೇವೇಗೌಡರು ಈ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದರು. ಮಂಗಳವಾರ ಮಧ್ಯಾಹ್ನ ನರೇಂದ್ರ ಮೋದಿ ಅವರು ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಬೋಗಿಬಿಲ್ ಸೇತುವೆಯನ್ನು ಉದ್ಘಾಟಿಸಿದರು. ಈ ಸೇತುವೆಯ ಉದ್ದ 4.9 ಕಿ.ಮೀ., ರೈಲು ಹಾಗೂ ರಸ್ತೆ ಸಂಪರ್ಕವನ್ನು ಈ ಸೇತುವೆ ಕಲ್ಪಿಸುತ್ತದೆ.
ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವಾಗಿದ್ದು, 2002ರಲ್ಲಿ ಅವರೇ ಈ ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದರು. ಹಾಗಾಗಿ ಉತ್ತಮ ಆಡಳಿತದ ದಿನವಾದ ಇಂದು ಲೋಕಾರ್ಪಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಬೋಗಿಬಿಲ್ ಸೇತುವೆ ತುರ್ತು ಸಂದರ್ಭದಲ್ಲಿ ಯುದ್ಧ ವಿಮಾನವನ್ನು ಕೂಡಾ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವಷ್ಟು ಸುಭದ್ರವಾಗಿದೆ. ದೇಶದ ಅತ್ಯಂತ ಉದ್ದನೆಯ ರೈಲ್‌ರೋಡ್ ಸೇತುವೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದ್ದು, ಪೂರ್ಣವಾಗಿ ವೆಲ್ಡಿಂಗ್ ಮೂಲಕ ನಿರ್ಮಿಸಿದ ದೇಶದ ಏಕೈಕ ಹಾಗೂ ಮೊದಲ ಸೇತುವೆ ಇದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ