ಹಾವೇರಿ:
ದೂರು ನೀಡಲು ಬಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸರಿಗೆ ಸಾರ್ವಜನಿಕರೇ ಥಳಿಸಿದ್ದಾರೆ ನಂತರ ಮಹಿಳೆಯನ್ನು ರಕ್ಷಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಬುದ್ಧಿಮಾಂದ್ಯ ಬಾಲಕಿಯರಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ ಬ್ಯಾಡಗಿ ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತನ್ನ ಮೇಲೆ ಸಂಬಂಧಿಕನೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ದೂರು ನೀಡಲು ಹೋದಾಗ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಹಿಳೆ ನೀಡಿರುವ ದೂರು ಹಾಗೂ ಪೊಲೀಸ್ ಅಧಿಕಾರಿ ನೀಡಿರುವ ದೂರನ್ನು ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸುತ್ತಿರುವುದಾಗಿ ಹೆಚ್ಚುವರಿ ಎಸ್ ಪಿ ಜಿಎ ಜಗದೀಶ್ ಹೇಳಿದ್ದಾರೆ.
ಮಹಿಳೆ ಇದರಿಂದ ಕೋಪಗೊಂಡು ಕೂಡಲೇ ಗ್ರಾಮಸ್ಥರನ್ನು ಕರೆತಂದು ಪೊಲೀಸರು ವಿರುದ್ಧವೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾಳೆ. ಈ ವೇಳೆ ಗ್ರಾಮಸ್ಥರು ಆ ಪೊಲೀಸ್ ಅಧಿಕಾರಿಯನ್ನು ಹಿಡಿದು ಥಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/rapegirllawyer_d.jpg)