ಶಬರಿಮಲೆ ಅಯ್ಯಪ್ಪ ದೇವರೇ ಅಲ್ಲ ಎಂದ ಪ್ರಕಾಶ್ ರೈ..!!!

ಬೆಂಗಳೂರು :

     ಮಹಿಳೆಯರನ್ನು ನೋಡದ ದೇವರು ತನಗೆ ದೇವರೇ ಅಲ್ಲ ಎಂದು ನಟ ಪ್ರಕಾಶ್ ರೈ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಷಯ ಕುರಿತಂತೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

      ಗಲ್ಫ್ ನ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಭಾಗಿಯಾಗಿದ್ದ ಪ್ರಕಾಶ್ ರೈ ಶಬರಿ ಮಲೆ ದೇಗುಲದ ವಿವಾದ ಕುರಿತು ಮಾತನಾಡಿ, ಹೆಣ್ಣು ಅಂದ್ರೆ ತಾಯಿ, ಭೂಮಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ. ಅದೇ ಹೆಣ್ಣಿನಿಂದ ಎಲ್ಲರೂ ಜನ್ಮ ತಾಳುತ್ತೇವೆ. ಹೆಣ್ಣಿಗೆ ಅಪಾರವಾದ ಗೌರವ ಕೊಡುವ ಸಂಸ್ಕೃತಿಯಲ್ಲಿ ದೇವರನ್ನು ನೋಡುವುದು ಮತ್ತು ಪೂಜಿಸುವ ಹಕ್ಕನ್ನು ನಿರ್ಬಂಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

     ಯಾವ ಭಕ್ತರು ಸ್ತ್ರೀಯರಿಗೆ ದೇವರ ದರ್ಶನಕ್ಕೆ ಅವಕಾಶ ಕೊಡುವುದಿಲ್ಲವೋ ಅವರು ಭಕ್ತರೇ ಅಲ್ಲ. ಮಹಿಳೆಯರನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಯಾವ ದೇವರು ಮಹಿಳೆಯನ್ನು ನೋಡೋದಿಲ್ಲವೋ ಅದು ದೇವರೇ ಅಲ್ಲ. ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ, ದೇವರ ದರ್ಶನಕ್ಕೆ ಅವಕಾಶ ಕೊಡಲೇಬೇಕು ಎಂದು ತಿಳಿಸಿದ್ದಾರೆ. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link