ಬಿಗ್ ಶಾಕ್ : ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ ಭಾರೀ ಹೆಚ್ಚಳ!!

ದೆಹಲಿ : 

    ಮೆಟ್ರೋ ನಗರಗಳಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಸಬ್ಸಿಡಿ ರಹಿತ ದೇಶೀಯ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ.

      14 ಕೆಜಿ ತೂಕದ ಸಬ್ಸಿಡಿರಹಿತ ಸಿಲಿಂಡರ್ ಬೆಲೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಈಗ 858.50 ರೂಪಾಯಿಗಳಾಗಿದ್ದು, ಇದರ ಬೆಲೆಯಲ್ಲಿ 144.50 ರೂಪಾಯಿ ಏರಿಕೆಯಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ 145 ರೂಪಾಯಿ ಏರಿಕೆಯೊಂದಿಗೆ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 829.50 ರೂಪಾಯಿ ತಲುಪಿದೆ.

      ಕೋಲ್ಕತ್ತಾದಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 149 ರೂಪಾಯಿ ಏರಿಕೆಯೊಂದಿಗೆ 896.00 ರೂಪಾಯಿ ತಲುಪಿದ್ದು, ಚೆನ್ನೈನಲ್ಲಿ 147 ರೂಪಾಯಿ ಏರಿಕೆಯೊಂದಿಗೆ 881.00 ರೂಪಾಯಿ ತಲುಪಿದೆ.

      ಪರಿಷ್ಕೃತ ದರ ಇಂದಿನಿಂದಲೇ ಮೆಟ್ರೋ ಸಿಟಿಗಳಲ್ಲಿ ಜಾರಿಯಾಗಲಿದ್ದು, ಇದರಿಂದಾಗಿ ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap