ಭಾರತ-ಚೀನಾ ಸಂಘರ್ಷ : ಲಡಾಖ್ ಗೆ ಪ್ರಧಾನಿ ದಿಢೀರ್ ಭೇಟಿ!!

ಲಡಾಖ್ : 

     ಭಾರತ- ಚೀನಾ ನಡುವಣ ಗಡಿವಿವಾದದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು ಗಡಿ ಪ್ರದೇಶ ಲಡಾಖ್ ಗೆ ಭೇಟಿ ನೀಡಿದ್ದಾರೆ.

      ಲಡಾಖ್ ಸಮೀಪದ ನಿಮು ಪ್ರದೇಶಕ್ಕೆ ಇಂದು ಮುಂಜಾನೆಯೇ ಪ್ರಧಾನಿ ದಿಡೀರ್ ಭೇಟಿ ನೀಡಿದ್ದು, ಯೋಧರೊಂದಿಗೆ ಚರ್ಚೆ ನಡೆಸಿದರು. ಇದರೊಂದಿಗೆ ವಾಯುಸೇನೆ, ಭೂಸೇನೆ ಐಟಿಬಿಪಿ ಮುಖ್ಯಸ್ಥರೊಂದಿಗೆ ಗಡಿಯಲ್ಲಿನ ಸ್ಥಿತಿ ಕುರಿತು ಮಾಹಿತಿ ಮಾತುಕತೆ ನಡೆಸಿ ಸಮಾಲೋಚನೆ ನಡೆಸಿದರು.

     ಕಳೆದ ತಿಂಗಳು ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಭಾರತ ಕೂಡ ಚೀನಾಗೆ ತಿರುಗೇಟು ನೀಡಿದ್ದು, ಅವರ ದೇಶದ 40ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಇದರಿಂದ ಎರಡೂ ದೇಶಗಳ ನಡುವೆ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಇಂಥ ಸಂದರ್ಭದಲ್ಲಿ ಮೋದಿ ಗಡಿ ಭಾಗಕ್ಕೆ ಭೇಟಿ ನೀಡಿದ್ದಾರೆ.

      ಲಡಾಕ್ ಸಮೀಪದ ನಿಮು ಪ್ರದೇಶ ಸಮುದ್ರಮಟ್ಟದಿಂದ 11 ಸಾವಿರ ಅಡಿ ಎತ್ತರ ಪ್ರದೇಶದಲ್ಲಿರುವ ದುರ್ಗಮ ಪ್ರದೇಶವಾಗಿದೆ. ಇದು ಇಂಡಸ್ ನದಿ ತೀರದ ಜಂಕ್ಸಾರ್ ರೇಂಜ್ ನಲ್ಲಿದೆ. ಇನ್ನು ಪ್ರಧಾನಿ ತಮ್ಮ ದಿಢೀರ್ ಭೇಟಿ ನೀಡಿದ್ದು, ಗಡಿಯಲ್ಲಿನ ಸದ್ಯದ ಪರಿಸ್ಥಿತಿ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap