ಬೆಂಗಳೂರು:
ನಾನು ಮುಖ್ಯಮಂತ್ರಿಯಾಗಿರೋದು ಕೆಲವರಿಗೆ ಸಹಿಸಲು ಆಗುತ್ತಿಲ್ಲ,ಅಂತಹ ಪರಿಸ್ಥಿತಿಯಲ್ಲಿ ನಾನು ಸಿಎಂ ಆಗಿ ಕೆಲಸ ನಿರ್ವಹಿಸುತ್ತಿರುವೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,ನಾನು ಸಿಎಂ ಆಗಿರುವುದು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಆದರೆ ಇದರ ನಡುವೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಏನೇ ಆದರೂ ಐದು ವರ್ಷಗಳ ಕಾಲ ಆಡಳಿತ ನೀಡುವೆ ಎಂದರು.
ಉತ್ತರ ಪ್ರದೇಶದ ಕಾರ್ಯಕ್ರಮದಲ್ಲಿ ರೈತರ ಸಾಲ ಮನ್ನಾ ಮಾಡೋದು ಪಾಪ ಅಂತ ಮೋದಿ ಅವರು ಹೇಳುತ್ತಾರೆ. ಹಾಗಾದರೆ ಯಾರ ಸಾಲ ಮನ್ನಾ ಮಾಡೋದು ಎಂದು ಹರಿಹಾಯ್ದರು.ರೈತರ ಸಾಲ ಮನ್ನಾ ನಂತರ ಸ್ತ್ರೀಶಕ್ತಿ ಸಂಘಟನೆಗಳ ಸಾಲ ಮನ್ನಾ ಮಾಡುತ್ತೀನಿ. ಬ್ಯಾಂಕ್‍ಗಳಿಗೆ ನೋಟಿಸ್ ವಾಪಸ್ ತೆಗೆದುಕೊಳ್ಳುವಂತೆ ಸೂಚನೆ ನೀಡುತ್ತೇವೆ. ಶ್ರೀಘ್ರದಲ್ಲಿ ವಿಜಯಶ್ರೀಪುರ ನಿವಾಸಿಗಳ ಹಾಗೂ ಫಾಲ್ಕನ್ ಕಾರ್ಮಿಕರ ಸಮಸ್ಯೆ ಬಗೆಹರಿಸುವೆ ಎಂದು ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
