ಮೋದಿ ರಾಜಕೀಯ ಬಿಟ್ಟ ಕ್ಷಣವೇ ನಾನು ನಿವೃತ್ತಿ; ಕೇಂದ್ರ ಸಚಿವೆ ಸ್ಮೃತಿ ಇರಾನಿ

    ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ರಾಜಕೀಯ ಜೀವನದ ಕುರಿತು ಮಾತನಾಡಿದರು.
ಕೇಂದ್ರ ಸರ್ಕಾರದಲ್ಲಿ ಪ್ರಧಾನ ಸೇವಕ ಮೋದಿ ಅವರ ಕಾರ್ಯ ಕುರಿತು ವಿವರಿಸುವಂತೆ ಸಾರ್ವಜನಿಕರು ಒಬ್ಬರು ಪ್ರಶ್ನೆಗೆ ಉತ್ತರಿಸಿದ ಅವರು, ಯಾವಾಗಲೂ ನಾನು ವರ್ಚಸ್ವಿ ನಾಯಕನೊಂದಿಗೆ ಕೆಲಸ ಮಾಡಬೇಕು ಎಂದು ನಾನು ರಾಜಕೀಯಕ್ಕೆ ಬಂದೆ. ದಿವಂಗತ ಅಟಲ್​ ಬಿಹಾರಿ ವಾಜಪೇಯಿಯಂತಹ ನಾಯಕರ ಕೆಳಗೆ ಕೆಲಸ ಮಾಡುವ ಅದೃಷ್ಟ ನನಗೆ ಒಲಿಯಿತು. ಪ್ರಸ್ತುತ ನಾನು ಮೋದಿ ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ಯಾವಾಗ ರಾಜಕೀಯದಿಂದ ಮೋದಿ ಹಿಂದೆ ಸರಿಯುತ್ತಾರೋ ಅಂದೇ ನಾನು ಕೂಡ ನನ್ನ ರಾಜಕೀಯ ಜೀವನಕ್ಕೆ ತೆರೆ ಎಳೆಯುತ್ತೇನೆ ಎಂದರು.

   ಮೋದಿ  ಹೊರತಾಗಿ ಬೇರೆ ನಾಯಕನೊಂದಿಗೆ ಕೆಲಸ ಮಾಡಲು ಇಚ್ಛಿಸಿದ್ಧೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ರಾಜನಾಥ್​ ಸಿಂಗ್​, ನಿತಿನ್​ ಗಡ್ಕರಿ  ಜೊತೆ ನಾನು ಸದ್ಯ ಕೆಲಸ ಮಾಡುತ್ತಿಲ್ಲ. ನನ್ನ 18 ವರ್ಷದ ರಾಜಕೀಯ ಜೀವನದಲ್ಲಿ ಸಂಘಟನೆಯಲ್ಲಿ  ಅನೇಕ ನಾಯಕರೊಂದಿಗೆ ನಾನು ಕಾರ್ಯ ನಿರ್ವಹಿಸಿದ್ದೇನೆ. ವಾಜಪೇಯಿ ಹಾಗೂ ಎಲ್​ಕೆ ಅಡ್ವಾನಿ ಅವರಂತ ನಾಯಕರ ಜೊತೆ ಕೂಡ ಕೆಲಸ ಮಾಡುವ ಅವಕಾಶ ನನ್ನದಾಗಿತು ಎಂದರು.

   ಮೋದಿ ದೀರ್ಘಕಾಲದವರೆಗೆ ರಾಜಕೀಯದಲ್ಲಿ ಇರುವುದಿಲ್ಲ ಎಂದು ನೀವು ಭಾವಿಸುತ್ತೀರಾ. ಆದರೆ, ಅವರು ಇನ್ನು ಅನೇಕ ವರ್ಷಗಳ ಕಾಲ ಇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಮುಂಬರುವ ಚುನಾವಣೆಯಲ್ಲಿ ರಾಹುಲ್​ ವಿರುದ್ಧ ಅಮೇಥಿಯಿಂದ ನೀವು ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ಇದು ಪಕ್ಷಕ್ಕೆ ಬಿಟ್ಟ ವಿಚಾರ. ಈ ಕುರಿತು ಪಕ್ಷದ ಮುಖ್ಯಸ್ಥ ಅಮಿತ್​ ಶಾ ನಿರ್ಧರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap