ಚೀನಾ ಓಪನ್ ​: ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಔಟ್!!

 ದೆಹಲಿ :

      ಚೀನಾ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್​ ಪ್ರೀ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ.

      ಇಂದು ನಡೆದ ಪಂದ್ಯದಲ್ಲಿ ಸಿಂಧು ಥಾಯ್ಲೆಂಡ್​ನ ಪಾರ್ನ್​ಪಾವೆ ಚೋಚುವಾಂಗ್​ ವಿರುದ್ಧ 12-21, 21-13, 21-19 ಅಂತರದಿಂದ ಸೋಲನುಭವಿಸಿದರು. ಮೊದಲ ಗೇಮ್​ನಲ್ಲಿ ಸುಲಭವಾಗಿ ಗೆಲುವು ಸಾಧಿಸಿದ ಸಿಂಧು ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ, ಎರಡನೇ ಗೇಮ್​ನಲ್ಲಿ ಸಿಂಧುಗೆ ತಿರುಗೇಟು ನೀಡಿದ ಚೋಚುವಾಂಗ್​ 21-13 ಅಂತರದಿಂದ ಗೆಲುವು ಸಾಧಿಸಿ ಪಂದ್ಯದಲ್ಲಿ ಸಮ ಬಲ ಸಾಧಿಸಿದರು.

     ಅಂತಿಮ ಗೇಮ್​ನಲ್ಲಿ ಉಭಯ ಆಟಗಾರರು ಗೆಲುವಿಗಾಗಿ ಪೈಪೋಟಿ ನಡೆಸಿದರು. ಅಂತಿಮವಾಗಿ ಚೋಚುವಾಂಗ್​ ಗೆಲುವಿನ ನಗೆ ಬೀರಿದರು. 

      ಕಳೆದ ತಿಂಗಳಿನಲ್ಲಷ್ಟೇ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಪಿವಿ ಸಿಂಧೂ ಇತಿಹಾಸ ಬರೆದಿದ್ದರು. ಆದರೆ ಚೀನಾ ಓಪನ್‌ನಲ್ಲಿ ಮತ್ತದೇ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap