ಕಾಶಿಯಲ್ಲಿ ರಾಧಿಕಾ ಕುಮಾರಸ್ವಾಮಿ..!

0
289

      ನಟಿ ರಾಧಿಕಾ ಕುಮಾರಸ್ವಾಮಿ ಕಾಶಿಯಾತ್ರೆ ಮಾಡುತ್ತಿದ್ದಾರೆ ಎಂಬ ಸುದ್ಧಿ ಹರಿದಾಡುತ್ತಿದೆ. ಈಗ ಆ ಸುದ್ಧಿ ನಿಜ ಎಂದು ತಿಳಿದುಬಂದಿದೆ. 

       ಅಂದಹಾಗೆ ಅವರು ಕಾಶಿಗೆ ತೆರಳಿರುವುದು ‘ಭೈರಾದೇವಿ’ ಎಂಬ ಚಿತ್ರದ ಚಿತ್ರೀಕರಣಕ್ಕಾಗಿ. ಭೈರಾದೇವಿ ಇರುವುದು ಕಾಶಿಯಲ್ಲಿ. ಹಾಗಾಗಿ ಅಲ್ಲಿಯೇ ಚಿತ್ರೀಕರಣ ಮಾಡುತ್ತಿದ್ದಾರೆ ನಿರ್ದೇಶಕ  ಶ್ರೀಜೈ. 

      ಈ ಚಿತ್ರದಲ್ಲಿ ರಮೇಶ್ ಅರವಿಂದ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಅಂದರೆ, ಅವರು ತನಿಖಾಧಿಕಾರಿಯಾಗಿ ನಟಿಸುತ್ತಿದ್ದು, ಈಗಾಗಲೇ ರಮೇಶ್‌ ಅರವಿಂದ್‌ ನಟನೆಯ ದೃಶ್ಯಗಳನ್ನು ಕಾಶಿಯಲ್ಲಿ ಸೆರೆ ಹಿಡಿದಿದ್ದಾರಂತೆ ನಿರ್ದೇಶಕರು. ಭೈರಾದೇವಿ ಹುಡುಕಿಕೊಂಡು ಅವರು ಅಲ್ಲಿಗೆ ಹೊರಡುತ್ತಾರಂತೆ. 

      ಈ ಸಿನಿಮಾ ಶುರುವಾಗುವುದೇ ಕಾಶಿಯಿಂದ. ಗಂಗಾ ನದಿ ಕೂಡ ಸಿನಿಮಾದಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಲಿದೆಯಂತೆ. ಹಾಗಾಗಿಯೇ ಇಡೀ ಟೀಮ್‌ ಕಟ್ಟಿಕೊಂಡು ಕಾಶಿಯಲ್ಲಿ ಬೀಡು ಬಿಟ್ಟಿದ್ದಾರೆ ನಿರ್ದೇಶಕರು. 
     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here