ರಜನಿ ಫಿಲಂ ಶೂಟಿಂಗ್ ವೇಳೆ ಕಲ್ಲು ತೂರಾಟ!!

0
67

 ಮುಂಬೈ:

      ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ʼದರ್ಬಾರ್ʼ ಚಿತ್ರದ ಶೂಟಿಂಗ್ ವೇಳೆ ಕಾಲೇಜು ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ ಕಾರಣ ಚಿತ್ರೀಕರಣವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.

      ಮುಂಬೈನ ಕಾಲೇಜೊಂದರಲ್ಲಿ ಚಿತ್ರತಂಡ ಶೂಟಿಂಗ್‍ ಕೈಗೊಂಡಿತ್ತು. ಆದರೆ ಚಿತ್ರೀಕರಣ ನಡೆಯುವಾಗ ಕಾಲೇಜು ವಿದ್ಯಾರ್ಥಿಗಳಿಗೆ ಫೋಟೋವಾಗಲಿ ಅಥವಾ ವಿಡಿಯೋ ರೆಕಾ ರ್ಡಿಂಗ್ ಆಗಲಿ ಮಾಡುವಂತಿಲ್ಲ. ಜೊತೆಗೆ ಶೂಟಿಂಗ್ ಸ್ಥಳಕ್ಕೆ ವಿದ್ಯಾರ್ಥಿಗಳು ಬರದಂತೆ ಬ್ಯಾರಿಕೇಡ್ ಹಾಕಲಾಗಿತ್ತು.

      ಈ ನಿಯಮದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಚಿತ್ರತಂಡದ ಮೇಲೆ ಕಲ್ಲು ತೂರಿದ್ದಾರೆ. ಅಲ್ಲದೆ ಶೂಟಿಂಗ್ ನೋಡಲು ಅವಕಾಶ ಕೊಡ್ತಿಲ್ಲ ಅಂತಾ ಪ್ರತಿಭಟನೆ ಕೂಡಾ ಮಾಡಿದ್ದಾರೆ. ಇದ್ರಿಂದ ಗೊಂದಲ ಸೃಷ್ಟಿಯಾಗಿ ಕೆಲ ಕಾಲ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು.

      ನಿರ್ದೇಶಕ ಎ.ಎಸ್‍. ಮುರುಗದಾಸ್‍ ಘಟನೆ ಸಂಬಂಧ, ಕಾಲೇಜು ನಿರ್ವಹಣಾ ಮಂಡಳಿಗೆ ದೂರು ನೀಡಿದ್ದಾರೆ. ಅಲ್ಲದೆ ಶೂಟಿಂಗ್ ಸ್ಥಳವನ್ನು ಬದಲಾಯಿಸುವುದಾಗಿಯೂ ಹೇಳಿದ್ದಾರೆ. ದರ್ಬಾರ್ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರಿಗೆ ನಯನತಾರ ನಾಯಕಿಯಾಗಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

LEAVE A REPLY

Please enter your comment!
Please enter your name here