ಹೊಸದಿಲ್ಲಿ:
ಕೇಂದ್ರ ಸರಕಾರಕ್ಕೆ 1.76 ಲಕ್ಷ ಕೋಟಿ ರೂ. ಲಾಭಾಂಶ ಮತ್ತು ಹೆಚ್ಚುವರಿ ನಿಧಿಯನ್ನು ವರ್ಗಾಯಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಸೋಮವಾರ ನಿರ್ಧರಿಸಿದೆ.
ರಿಸರ್ವ್ ಬ್ಯಾಂಕಿನ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಹಿಸುವಂತೆ ಮಾಜಿ ಗೌವರ್ನರ್ ಬಿಮಾಲ್ ಜಲಾನ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿ ಮಾಡಿದ ಶಿಫಾರಸ್ಸನ್ನು ಆರ್‌ಬಿಐ ಮಂಡಳಿ ಅನುಮೋದಿಸಿದೆ. ಈ ಮೊತ್ತದಿಂದ ಸರಕಾರದ ಬೊಕ್ಕಸ ಹಗುರವಾಗಲಿದ್ದು, ಹಲವು ಮೂಲ ಸೌಕರ್ಯ ಯೋಜನೆಗಳಿಗೆ ಅನುದಾನ ಲಭ್ಯವಾಗಲಿದೆ.
ಸದ್ಯ, 2018-19ರ ಹೆಚ್ಚುವರಿ ಮೀಸಲು ನಿಧಿಯಾಗಿ 1.23 ಲಕ್ಷ ಕೋಟಿ ರೂ. ಮತ್ತು ಪರಿಷ್ಕರಿಸಿದ ಆರ್ಥಿಕ ಬಂಡವಾಳ ರೂಪುರೇಷೆ ಅಡಿಯಲ್ಲಿ ಹೆಚ್ಚುವರಿಯಾಗಿರುವ 52,637 ಕೋಟಿ ರೂ. ಅನ್ನು ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.
ಆರ್‌ಬಿಐನಿಂದ ಹೆಚ್ಚುವರಿ ಮೀಸಲು ನಿಧಿಯನ್ನು ಸರಕಾರಕ್ಕೆ ವರ್ಗಾವಣೆ ಮಾಡುವ ವಿಚಾರದಲ್ಲಿ ಕಳೆದ ವರ್ಷ ತೀವ್ರ ವಿವಾದ ಎದ್ದ ಅನಂತರದಲ್ಲಿ ಈ ಬಗ್ಗೆ ಪರಿಶೀಲಿಸಿ ವರದಿ ನೀಡಲು ಬಿಮಲ್ ಜಲನ್ ನೇತೃತ್ವದ ಸಮಿತಿ ರಚಿಸಲಾಗಿತ್ತು.
ಸಮಿತಿ ಶಿಫಾರಸಿನ ಮೇರೆಗೆ ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ. ನಿಧಿ ವರ್ಗಾವಣೆಗೆ ಸಮಿತಿ ಶಿಫಾರಸು ಮಾಡಿದ್ದು ಅದನ್ನು ಆರ್‌ಬಿಐ ಅಂಗೀಕರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ