100 ರೂ.ನಂತರ ಹಳೆಯ 5, 10 ರೂ. ನೋಟು ಕೂಡ ವಾಪಸ್!!

ಮಂಗಳೂರು :

    ಮಾರ್ಚ್ ಅಥವಾ ಏಪ್ರಿಲ್ ಅಂತ್ಯದೊಳಗೆ 10 ಹಾಗೂ 5 ರೂಪಾಯಿ ಹಳೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಸಿದ್ಧತೆ ನಡೆಸುತ್ತಿದೆ.

     ಮಂಗಳೂರು ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಭದ್ರತಾ ಸಮಿತಿ (ಡಿಎಲ್ ಎಸ್ ಸಿ) ಮತ್ತು ಜಿಲ್ಲಾ ಮಟ್ಟದ ಕರೆನ್ಸಿ ನಿರ್ವಹಣಾ ಸಮಿತಿ (ಡಿಎಲ್ ಎಂಸಿ) ಸಭೆಯಲ್ಲಿ ಮಾತನಾಡಿದ ಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಿ.ಮಹೇಶ್ ಅವರು ಮಾರ್ಚ್-ಏಪ್ರಿಲ್ ವೇಳೆಗೆ ಆರ್ ಬಿಐ ಹಿಂತೆಗೆಯಲು ಯೋಜಿಸಿರುವ ಕಾರಣ 100, 10 ಮತ್ತು 5 ರೂಪಾಯಿಯ ಹಳೆಯ ನೋಟುಗಳು ಚಲಾವಣೆಯಿಂದ ಹೊರಹೋಗುತ್ತವೆ ಎಂದು ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಈಗಾಗಲೇ 100, 10 ಹಾಗೂ 5 ರೂಪಾಯಿಯ ನೂತನ ನೋಟುಗಳು ಚಲಾವಣೆಗೆ ಬಂದಿದ್ದು, ಇದರಿಂದ ಹಳೆಯ ನೋಟುಗಳ ಬದಲಾವಣೆಗೆ ಅನುಕೂಲವಾಗಲಿದೆ ಎಂದು ವರದಿ ತಿಳಿಸಿದೆ.

     10 ರೂ ನಾಣ್ಯ ಜಾರಿಯಾಗಿ 15 ವರ್ಷ ಕಳೆದರೂ ವರ್ತಕರು, ನಾಣ್ಯ ಸ್ವೀಕರಿಸದಿರುವುದು ಬ್ಯಾಂಕ್ ಮತ್ತು ಆರ್ ಬಿಐಗೆ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು. 10 ರೂಪಾಯಿ ನಾಣ್ಯಗಳನ್ನು ಬ್ಯಾಂಕ್ ಗಳಲ್ಲಿ ರಾಶಿ ಹಾಕಲಾಗಿದೆ ಎಂದು ಅವರು ಹೇಳಿದರು. ನಾಣ್ಯದ ಸಿಂಧುತ್ವದ ಬಗ್ಗೆ ಹರಡಿರುವ ವದಂತಿಗಳ ಬಗ್ಗೆ ಬ್ಯಾಂಕ್ ಗಳು ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದ ಎಜಿಎಂ, 10 ರೂಪಾಯಿ ನಾಣ್ಯವನ್ನು ಸಾರ್ವಜನಿಕರು ಬಳಕೆ ಮಾಡಲು ಬ್ಯಾಂಕ್ ದಾರಿ ಗಳನ್ನು ಕಂಡುಹಿಡಿಯಬೇಕು ಎಂದು ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link