ಇವಿಎಂ ಮೇಲಿನ ಆರೋಪ ತಿರಸ್ಕರಿಸಿದ ಆಯೋಗ!

ದೆಹಲಿ:

      ಇವಿಎಂ ಮತ್ತು ವಿವಿಪ್ಯಾಟ್ ಗಳ ನಿರ್ವಹಣೆ ಅಸಮರ್ಪಕವಾಗಿದೆ ಎಂಬ ಆರೋಪವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

       ಇವಿಎಂ ಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾಯಿಸಿ, ಫಲಿತಾಂಶಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಚುಮಾವಣಾ ಆಯೋಗ ಸ್ಪಷ್ಟನೆ ನೀಡಿದ್ದು, ಇವಿಎಂ, ವಿವಿಪ್ಯಾಟ್​ಗಳನ್ನು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಎದುರಿಗೇ ಸೀಲ್​ ಮಾಡಲಾಗಿದೆ. ಅದನ್ನು ವಿಡಿಯೋ ಕೂಡ ಮಾಡಲಾಗಿದೆ. ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಲಾಗಿತ್ತು. ಸುಮ್ಮನೆ ಪ್ರತಿಭಟನೆ ನಡೆಸಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

      ವಿವೇಚನೆ ಇಲ್ಲದೆ ಹೀಗೆಲ್ಲ ಮಾಡಲಾಗುತ್ತಿದೆ. ಮೇ 23 ರಂದು ಮತಎಣಿಕೆ ನಡೆಯಲಿದ್ದು ಈ ಸಂಬಂಧ ಸ್ಟ್ರಾಂಗ್​ ರೂಂಗಳ ಭದ್ರತೆ ವಿಚಾರದಲ್ಲಿ ಎಲ್ಲ ರೀತಿಯ ಶಿಷ್ಟಾಚಾರವನ್ನೂ ಪಾಲಿಸಲಾಗುತ್ತಿದೆ ಎಂದು ಹೇಳಿದೆ.

      ಉತ್ತರಪ್ರದೇಶದಲ್ಲಿ ಹಲವು ವಿಡಿಯೋಗಳೊಂದಿಗೆ ಇವಿಎಂಗಳು ಬದಲಾಗುತ್ತಿವೆ. ಅವುಗಳನ್ನು ಬೇರೆಡೆಗೆ ಸಾಗಿಸಲಾಗುತ್ತಿದೆ, ಸೂಕ್ತ ಭದ್ರತೆ ನೀಡಿಲ್ಲ ಎಂಬಂಥ ಆರೋಪಗಳು ಕೇಳಿಬಂದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ ಆಯೋಗ ಇವಿಎಂ ಮತ್ತು ವಿವಿಪ್ಯಾಟ್ ಗಳು ಸುರಕ್ಷಿತವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

       

Recent Articles

spot_img

Related Stories

Share via
Copy link
Powered by Social Snap