ದೆಹಲಿ:
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 20 ರೂ. ಮುಖಬೆಲೆಯ ಹೊಸ ನೋಟಿನ ಮಾದರಿಯನ್ನು ಪರಿಚಯಿಸಿದೆ.
20 ರೂ. ಮುಖಬೆಲೆಯ ಹೊಸ ನೋಟು ಹಸಿರು ಮತ್ತು ಹಳದಿ ಮಿಶ್ರಣದ ಬಣ್ಣವನ್ನು ಹೊಂದಿರಲಿದೆ. ನೋಟಿನ ಮುಂಭಾಗದ ಮಧ್ಯದಲ್ಲಿ ಮಹಾತ್ಮಾಗಾಂಧಿ ಫೋಟೋ ಇರಲಿದ್ದು, ಹಿಂಭಾಗದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಎಲ್ಲೋರ ಗುಹಾಲಯ ಚಿತ್ರ ಹೊಂದಿರಲಿದೆ. ಹೊಸ ನೋಟುಗಳ ಜೊತೆಗೆ ಹಳೆಯ ನೋಟುಗಳು ಚಾಲ್ತಿಯಲ್ಲಿರಲಿವೆ. ಹೊಸ ನೋಟು 63 ಎಂಎಂ ಅಗಲ ಹಾಗೂ 129 ಮಿಮಿ ಉದ್ದವಿರಲಿದೆ.
ಹೊಸ 20 ರೂಪಾಯಿಯಲ್ಲಿ ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ಸಹಿಯಿರಲಿದೆ. ಜೊತೆಗೆ ದೇಶದ ಸಂಸ್ಕೃತಿ ಬಿಂಬಿಸುವ ಎಲ್ಲೋರು ಗುಹೆಗಳ ಚಿತ್ರವಿರಲಿದೆ. ಮಹಾತ್ಮಾ ಗಾಂಧಿ ಸರಣಿಯ ಹೊಸ ನೋಟಿನ ಜೊತೆ ಹಳೆ 20 ರೂಪಾಯಿ ನೋಟು ಕೂಡ ಚಾಲ್ತಿಯಲ್ಲಿರಲಿದೆ ಎಂದು ಆರ್.ಬಿ.ಐ. ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ