ಲಂಡನ್:
ಪ್ರಸಿದ್ಧ ಹಾಲಿವುಡ್ ನಾಯಕಿ ಸೋಫಿಯಾ ಮೈಲ್ಸ್ ತಂದೆ ಪೀಟರ್ ಮೈಲ್ಸ್ (೬೭) ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಪೀಟರ್ ಮೈಲ್ಸ್ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಸೋಂಕಿನಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ ಅವರು ಶನಿವಾರ ನಿಧನರಾದರು. ಸೋಫಿಯಾ ತನ್ನ ತಂದೆಯ ಸಾವಿನ ಸುದ್ದಿಯನ್ನು ಟ್ವಿಟ್ಟರ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನನ್ನ ತಂದೆ ಕೆಲವು ಗಂಟೆಗಳ ಹಿಂದೆ ನಿಧನರಾದರು. ಕೊರೊನಾ ವೈರಸ್ ಕಾರಣ ಸಾವನ್ನಪ್ಪಿದರು ಎಂದು ಪ್ರಕಟಿಸಿದ್ದಾರೆ.
ಆಸ್ಪತ್ರೆಯಲ್ಲಿ ತನ್ನ ತಂದೆ ಬಳಿಯಿರುವ ಫೋಟೋವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿರುವ ಅವರು, ಕೆಲವು ದಿನಗಳಿಂದ ತನ್ನ ತಂದೆಯ ಆರೋಗ್ಯದ ಬಗ್ಗೆ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಿದ್ದ ಸೋಫೀಯಾ, ಕೆಲ ದಿನಗಳ ಹಿಂದೆ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದರು.
ಎಲ್ಲರಿಗೂ ಎಚ್ಚರಿಕೆ ನೀಡುತ್ತೇನೆ. ಕರೋನಾ ಸೋಂಕಿಗೆ ಒಳಗಾಗಿದ್ದ ನನ್ನ ತಂದೆಯನ್ನು ವಿಶೇಷ ವಾರ್ಡ್‌ನಲ್ಲಿ ಇರಿಸಿದ್ದರು. ಅಲ್ಲಿ ಎಲ್ಲರೂ ಕೊರೊನಾ ಬಾಧಿತರೇ ಇದ್ದರು. ಈಗ ಒಬ್ಬಬ್ಬರೇ ಸಾಯುತ್ತಿದ್ದಾರೆ. ಇವರೆಲ್ಲರೂ ಹಿರಿಯರು. ದಯವಿಟ್ಟು ಕೊರೊನಾ ಸೋಂಕನ್ನು ಗಂಭೀರವಾಗಿ ಪರಿಗಣಿಸಿ ಎಂದು ಮನವಿ ಮಾಡಿದ್ದರು. ಬ್ರಿಟನ್ ನಲ್ಲಿ ಈವರೆಗೆ ೫,೦೧೮ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಸುಮಾರು ೨೩೩ ಜನರು ಸಾವನ್ನಪ್ಪಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ