ನವದೆಹಲಿ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ದೇಶಾದ್ಯಂತ ಸೇಫ್ ಡೆಪಾಸಿಟ್ ಲಾಕರ್ ಗಳ ಬಾಡಿಗೆ ಶುಲ್ಕವನ್ನು ಹೆಚ್ಚಿಸಲಿದ್ದು, ಹೊಸ ಬಾಡಿಗೆ ಶುಲ್ಕವು 31 ಮಾರ್ಚ್ 2020 ರಿಂದ ಜಾರಿಗೆ ಬರಲಿದೆ.
SBI ಲಾಕರ್ ಶುಲ್ಕವು 500 ರೂ.ನಿಂದ 2000 ರೂ.ಏರಿಕೆ ಆಗಲಿದೆ ಎನ್ನಲಾಗಿದ್ದು, ದೊಡ್ಡ ಲಾಕರ್ ಗಳ ವಾರ್ಷಿಕ ಶುಲ್ಕ 12,000 ರೂ. ಆಗಲಿದೆ.
ಸದ್ಯಕ್ಕೆ ದೊಡ್ಡ ಲಾಕರ್ ಗಳ ಶುಲ್ಕ 9,000 ರೂ. ಇದೆ. ಮಧ್ಯಮ ಗಾತ್ರದ ಲಾಕರ್ ಗಳ ಬಾಡಿಗೆ ಶುಲ್ಕ 1 ಸಾವಿರ ರೂ.ನಿಂದ 4 ಸಾವಿರ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ನಿಗದಿತ ಸಮಯಕ್ಕೆ ಸರಿಯಾಗಿ ಶುಲ್ಕ ಪಾವತಿ ಮಾಡದಿದ್ದಲ್ಲಿ ಶೇ. 40 ರಷ್ಟು ದಂಡ ವಿಧಿಸಲಾಗುತ್ತದೆ.
ಈ ಶುಲ್ಕಗಳು ಮೆಟ್ರೋ ನಗರಗಳು ಹಾಗೂ ಪಟ್ಟಣ ನಗರ ಪ್ರದೇಶಗಳಿಗೆ ಅನ್ವಯ ಆಗಲಿದ್ದು, ಈ ಶುಲ್ಕವನ್ನು ಹೊರತುಪಡಿಸಿ ಜಿಎಸ್ಟಿ ಕೂಡ ಸೇರಿಕೊಳ್ಳಲಿದೆ.
ಇನ್ನು ಲಾಕರ್ ನೋಂದಣಿ ಶುಲ್ಕ ಎಂದು 500 ರುಪಾಯಿ ಹಾಗೂ ಜಿಎಸ್ ಟಿ ಪಾವತಿಸಬೇಕು. ಈ ಮೊತ್ತ ಸಣ್ಣ ಮತ್ತು ಮಧ್ಯಮ ಗಾತ್ರದ ಲಾಕರ್ ಗಳಿಗೆ. ಅದೇ ದೊಡ್ಡ ಮತ್ತು ಅತಿ ದೊಡ್ಡ ಗಾತ್ರದ ಲಾಕರ್ ಗಳಿಗೆ 1,000 ರುಪಾಯಿ ಮತ್ತು ಜಿಎಸ್ ಟಿ ಪಾವತಿಸಬೇಕು.