ಕಲಾಪಕ್ಕೆ ಅಡ್ಡಿಪಡಿಸಿದ 7 ‘ಕಾಂಗ್ರೆಸ್’ ಸದಸ್ಯರು ಅಮಾನತು!!

ನವದೆಹಲಿ: 

      ಲೋಕಸಭಾ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ 7 ಮಂದಿ ಕಾಂಗ್ರೆಸ್ ಸಂಸದರನ್ನು  ಈ ಬಾರಿಯ ಲೋಕಸಭಾ ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸಿ ಸ್ಪೀಕರ್ ಓಂ ಬಿರ್ಲಾ ಆದೇಶಿಸಿದ್ದಾರೆ.

      ಲೋಕಸಭೆಯ ಕಲಾಪ ಆರಂಭವಾದಾಗಿನಿಂದ ಕಾಂಗ್ರೆಸ್ ನ ಸಂಸದರು ದೇಶದ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸುವ ಬದಲು, ದೆಹಲಿ ಹಿಂಸಾಚಾರ ಸೇರಿದಂತೆ ಹಲವು ವಿಚಾರಗಳನ್ನು ಇಟ್ಟುಕೊಂಡು ಗದ್ದಲ, ಕೋಲಾಹಲಕ್ಕೆ ಕಾರಣವಾಗುತ್ತಿದ್ದರು. ಅಲ್ಲದೇ ಲೋಕಸಭೆಯಲ್ಲಿ ಅಶಿಸ್ತನ್ನು ಪ್ರದರ್ಶಿಸುತ್ತಿದ್ದರು. ಈ ಮೂಲಕ ಲೋಕಸಭಾ ಕಲಾಪ ಸುಗಮವಾಗಿ ನಡೆಯಲು ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಕಾರಣದಿಂದಾಗಿ, ಕಾಂಗ್ರೆಸ್ ನ 7 ಸಂಸದರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಆದೇಶಿಸಿದ್ದಾರೆ.

      ಗೌರವ್ ಗೊಗೊಯಿ, ಟಿ.ಎನ್.ಪ್ರತಾಪನ್, ಡಿಯನ್ ಕುರಿಕೋಸ್, ಆರ್. ಉಣ್ಣಿತ್ತಾನ್, ಮನಿಕಮ್ ಟಾಗೋರ್, ಬೆನ್ನಿ ಬೆಹ್ನನ್ ಮತ್ತು ಗುರ್‌ಜೀತ್ ಸಿಂಗ್ ಔಜ್‌ಲಾ ಅಮಾನತುಗೊಂಡಿರುವ ಸಂಸದರು.

      ಮಂಗಳವಾರ ಕಲಾಪಕ್ಕೆ ಅಡ್ಡಿ ಪಡಿಸುವ ಸಂದರ್ಭದಲ್ಲಿ ಸ್ಪೀಕರ್ ಓಂ ಬಿರ್ಲಾ ಇದೇ ರೀತಿ ಅಡ್ಡಿ ಮಾಡುವುದನ್ನು ಮುಂದುವರಿಸಿದರೆ ಸದಸ್ಯರನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.ಪ್ರಜಾಪ್ರಗತಿ, Prajapragathi

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ