POK ಪ್ರದೇಶ ಭಾರತದ್ದು ಎಂದು ತೋರಿಸಿದ ಪಾಕಿಸ್ತಾನ!!?

ಇಸ್ಲಾಮಾಬಾದ್:

      ತಾನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶ (POK) ಭಾರತದ್ದು ಎಂದು ತನ್ನ ವೆಬ್​ಸೈಟ್​ನಲ್ಲಿ ಹಾಕುವ ಮೂಲಕ ಪಾಕಿಸ್ತಾನ ಎಡವಟ್ಟು ಮಾಡಿಕೊಂಡಿದೆ.

      ಕರೊನಾ ವೈರಸ್ ಬಗ್ಗೆ ಮಾಹಿತಿ ನೀಡಲು ಪಾಕಿಸ್ತಾನ ಸರ್ಕಾರವು Covid.gov.pok ಎಂಬ ವೆಬ್‍ಸೈಟ್ ಆರಂಭಿದೆ. ಇದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದ ಭಾಗ ಎಂಬಂತೆ ವಿವರಿಸಲಾಗಿದೆ. ಈ ವೆಬ್‍ಸೈಟ್ ಗ್ರಾಫಿಕ್ಸ್ ಮೂಲಕ ಕರೊನಾದ ವ್ಯಾಪ್ತಿಯನ್ನು ವಿವರಿಸಲಾಗಿದೆ.

     ಗಿಲ್ಗಿಟ್​ ಹಾಗೂ ಬಾಲ್ಟಿಸ್ತಾನ್​ವನ್ನು ಭಾರತದ ನಕ್ಷೆಯಲ್ಲಿ ಸೇರಿಸಿದೆ. ವೆಬ್​ಸೈಟ್​ನಲ್ಲಿ ಆದ ಈ ತಪ್ಪು, ಅಲ್ಲಿನ ಸರ್ಕಾರಕ್ಕೆ ಮುಖಭಂಗವನ್ನ ತಂದೊಡ್ಡಿದೆ. ಈ ಮೂಲಕ ತಾನು ಕಾಶ್ಮೀರದ ಪ್ರದೇಶವನ್ನು ಆಕ್ರಮಿಸಿಕೊಂಡಿರುವುದು ನಿಜ ಎಂದು ಪಾಕಿಸ್ತಾನವೇ ಒಪ್ಪಿಕೊಂಡಂತಾಗಿದೆ ಎಂಬ ಟೀಕೆಗಳು ಆ ದೇಶದಲ್ಲಿಯೇ ಕೇಳಿಬರುತ್ತಿವೆ.

     ಈ ನಕ್ಷೆಯ ಫೋಟೋ ನೋಡಿದ ತಕ್ಷಣವೇ ನೆಟ್ಟಿಗರು ಟ್ವಿಟರ್​ನಲ್ಲಿ ಪಾಕಿಸ್ತಾನ ಸರ್ಕಾರವನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link