10 ವರ್ಷದ ಬಳಿಕ ಪಂಪ್ ವೆಲ್ ಫ್ಲೈ ಓವರ್ ಲೋಕಾರ್ಪಣೆ
ಮಂಗಳೂರು
ಕಳೆದ ಹತ್ತು ವರ್ಷಗಳಿಂದ ಮಂಗಳೂರು ಜನತೆಯ ಕನಸಾಗಿದ್ದ ಕುಂದಾಪುರದ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ಕೊನೆಗೂ ಮುಕ್ತಾಯಗೊಂಡಿದ್ದು ಇಂದು ಉದ್ಘಾಟನೆಯಾಗಿದೆ .
ಮಂಗಳೂರಿನ ಪಂಪ್ ವೆಲ್ ಫ್ಲೈಓವರ್ ಕಾಮಗಾರಿ ವಿಷಯ ಹೆಚ್ಚು ಚರ್ಚೆಯಾಗಿತ್ತು. ಕೇವಲ 600 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡು ಹತ್ತು ವರ್ಷ ಕಳೆದರೂ ಮುಗಿಯದೇ ಇದ್ದದ್ದು ಹಲವರ ಆಕ್ರೋಶಕ್ಕೂ ಎಡೆಮಾಡಿಕೊಟ್ಟಿತ್ತು. ಇದೇ ಕಾರಣಕ್ಕೆ ಹಲವು ಪ್ರತಿಭಟನೆ, ವಿರೋಧಗಳೂ ವ್ಯಕ್ತವಾಗಿತ್ತು. ಕೊನೆಗೂ ಇಂದು ಫ್ಲೈ ಓವರ್ ಮುಕ್ತವಾಯಿತು.
ಮಂಗಳೂರು ಪ್ರವೇಶಿಸುತ್ತಿದ್ದಂತೆ ಸಿಗುವ ಪಂಪ್ ವೆಲ್ ಮಂಗಳೂರಿನ ಕಳಶವಿದ್ದಂತೆ. ಅದಕ್ಕಾಗಿ 10 ವರ್ಷದ ಹಿಂದೆ ಇಲ್ಲಿ ಸರ್ಕಲ್ ನ ಮಧ್ಯೆ ಕಳಶದ ಬೃಹತ್ ಮಾದರಿಯನ್ನು ಇಡಲಾಗಿತ್ತು. 2010ರಲ್ಲಿ ಆರಂಭವಾದ ಮಂಗಳೂರು ಪಂಪ್ ವೆಲ್ ಫ್ಲೈಓವರ್ ಕೆಲಸಕ್ಕೆ ಅಂದಿನ ನೂತನ ಸಂಸದ ನಳಿನ್ ಕುಮಾರ್ ಕಟೀಲ್ ಶಂಕುಸ್ಥಾಪನೆ ಮಾಡಿದ್ದರು. ಕೇವಲ 600 ಮೀಟರ್ ಉದ್ದದ ಫ್ಲೈಓವರ್ ಕಾಮಗಾರಿ 10 ವರ್ಷವಾದರೂ ಪೂರ್ಣಗೊಂಡಿರಲಿಲ್ಲ. ಇದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಳಿನ್ ವಿರುದ್ಧ ಭಾರೀ ಆಕ್ಷೇಪಕ್ಕೂ ಕಾರಣವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ