ಪಾಟ್ನಾ :
ತನ್ನ ಸಹೋದರನ 2ನೇ ಪತ್ನಿಯನ್ನು ಕೋಪದಿಂದ ಸಹೋದರ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬಿಹಾರದ ಗೋಪಾಲಗಂಜ್ ನಲ್ಲಿ ನಡೆದಿದೆ.
ಮೀನಾ ದೇವಿ (34) ಕೊಲೆಯಾದ ಮಹಿಳೆ. ಮನೋಜ್ (30) ಕೊಲೆ ಮಾಡಿದ ಆರೋಪಿ. ಹಿರಿಯ ಸಹೋದರನ ಮೊದಲ ಪತ್ನಿ ನಿಧನರಾಗಿದ್ದಾರೆ. ಅವರಿಗೆ ಚಿಕ್ಕ ಮಕ್ಕಳಿದ್ದ ಕಾರಣ ಅವರು 2ನೇ ಮದುವೆಯಾಗಿದ್ದಾರೆ. ಆದರೆ ಆರೋಪಿ ಮನೋಜ್ ಗೆ ಇನ್ನೂ ಮದುವೆಯಾಗಿಲ್ಲ.
ಮನೆಯವರೆಲ್ಲಾ ಸೇರಿ ತನಗೆ ಮದುವೆ ಮಾಡುವ ಬದಲು ಹಿರಿಯ ಸಹೋದರನಿಗೆ ಮದುವೆ ಮಾಡಿದ್ದಕ್ಕೆ ಕೋಪಗೊಂದ ಆತ ಮೀನಾದೇವಿ ರಾತ್ರಿ ಮಲಗಿದ್ದಾಗ ಹರಿತವಾದ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಆರೋಪಿ ಮನೋಜ್ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕಂಡ ಪೊಲೀಸರು ಆತನನ್ನು ಹುಡುಕಿ ಬಂಧಿಸಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ