ಲಕ್ನೋ:
ಮಿನಿ ಟ್ರಕ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಜನ ರೈತರು ಸಾವಿಗೀಡಾಗಿರುವ ಘಟನೆ ಇಟವಾ ಜಿಲ್ಲೆಯ ಫ್ರೆಂಡ್ಸ್ ಕಾಲೋನಿ ಪ್ರದೇಶದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ರೈತರೆಲ್ಲರು ಮಾರುಕಟ್ಟೆಗೆ ಹಲಸು ಮಾರಲು ತೆರಳುತ್ತಿದ್ದರು. ಈ ವೇಳೆಯಲ್ಲಿ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದು, ಇವರನ್ನು ಸ್ಥಳೀಯ ಸೈಫಿ ಮೆಡಿಕಲ್ ಕಾಲೇಜು ಆಸ್ಪತ್ರಗೆ ದಾಖಲಿಸಲಾಗಿದೆ.
6 farmers killed & 1 injured after the pickup-truck in which they were travelling collided with another truck in Friends Colony area of Etawah, last night. R Singh, SP City says, "Farmers were going to market to sell jackfruit. Injured person admitted at Saifai Medical College". pic.twitter.com/lu2dkGaEME
— ANI UP (@ANINewsUP) May 20, 2020
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಮೃತರ ಕುಟುಂಬಕ್ಕೆ ಎರಡು ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50,000 ಪರಿಹಾರ ಧನವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ವಲಸೆ ಕಾರ್ಮಿಕರ ಪ್ರಯಾಣ ಆರಂಭವಾಗುತ್ತಿದ್ದಂತೆ, ರಸ್ತೆ ಅಪಘಾತಗಳು ಸಹ ಹೆಚ್ಚಿವೆ, ಜೊತೆಗೆ ವಲಸೆ ಕಾರ್ಮಿಕರ ಸಾವು ಪ್ರಕರಣಗಳು ಹೆಚ್ಚಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ