ನಕಲಿ ಎಕೆ-47 ರೈಫಲ್‌ ಪ್ರದರ್ಶನ : ರೀಲ್ಸ್‌ ಸ್ಟಾರ್‌ ಬಂಧನ…..!

ಬೆಂಗಳೂರು:

    ನಕಲಿ ಎಕೆ-47 ರೈಫಲ್‌ಗಳನ್ನು ಹಿಡಿದ ಅಂಗರಕ್ಷಕರೊಂದಿಗೆ ಸಾರ್ವಜನಿಕವಾಗಿ ಐಷಾರಾಮಿ ಕಾರಿನಲ್ಲಿ ತೆರಳುವ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ 25 ವರ್ಷದ ವ್ಯಕ್ತಿಯನ್ನು ಕೊತ್ತನೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ಆರೋಪಿಯನ್ನು ಜೆಪಿ ನಗರದ ನಿವಾಸಿ ಅರುಣ್ ಕಠಾರೆ ಎಂದು ಗುರುತಿಸಲಾಗಿದ್ದು, ದುಬಾರಿ ಕಾರುಗಳು, ಫಾರಿನ್ ಹುಡುಗಿಯರು, ಮೈಮೇಲೆ ಗೋಲ್ಡ್ ಹಾಕೊಂಡು ರೀಲ್ಸ್ ಮಾಡುತ್ತಿದ್ದ ಅರುಣ್ ಕಠಾರೆ ಮೂಲತಃ ಚಿತ್ರದುರ್ಗದವರು. ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಆಧರಿಸಿ ಕಠಾರೆ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಠಾರೆ ಅಂಗರಕ್ಷಕರು ನಕಲಿ ಎಕೆ-47 ರೈಫಲ್‌ಗಳನ್ನು ಹಿಡಿದುಕೊಂಡಿದ್ದು, ಅವರ ಈ ಕೃತ್ಯವು ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು ಎಂದು ಅವರು ಹೇಳಿದ್ದಾರೆ. 

   ಏತನ್ಮಧ್ಯೆ, ಕಠಾರೆ ವಿರುದ್ಧ ಐಪಿಸಿಯ ಸೆಕ್ಷನ್ 25 (ಶಸ್ತ್ರಾಸ್ತ್ರ ಕಾಯ್ದೆ) ಮತ್ತು 290 (ಸಾರ್ವಜನಿಕ ತೊಂದರೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕಠಾರೆ ರೀಲ್‌ಗಳನ್ನು ತಯಾರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಾರೆ ಮತ್ತು ಜೆಪಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಸ್ನೇಹಿತರೊಂದಿಗೆ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಠಾರೆ ನಕಲಿ ದೊಡ್ಡ ದೊಡ್ಡ ಚಿನ್ನದ ಆಭರಣಗಳನ್ನು ಧರಿಸಿ, ಐಷಾರಾಮಿ ಕಾರಿನಲ್ಲಿ, ಅಂಗರಕ್ಷಕರೊಂದಿಗೆ ತಿರುಗಾಡುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಕಾಣಬಹುದು.

    2023ರಲ್ಲಿ ಚಿತ್ರದುರ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ಬೆದರಿಸಿ ಸುಲಿಗೆ ಮಾಡಿದ ಆರೋಪದ ಮೇಲೆ ಕಠಾರೆ ಜೈಲಿಗೆ ಹೋಗಿದ್ದ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link