ಗಣರಾಜೋತ್ಸವದಂದು ದಾಳಿಗೆ ಸಂಚು : ಐವರು ಉಗ್ರರ ಬಂಧನ!!!

ಶ್ರೀನಗರ:

      ಗಣರಾಜೋತ್ಸವ ದಿನಾಚರಣೆಯಂದು ಭಾರಿ ದಾಳಿ ನಡೆಸಲು ಸಂಚು ರೂಪಿಸಿದ ಜೈಷ್-ಇ- ಮೊಹಮ್ಮದ್ ಸಂಘಟನೆಗೆ ಸೇರಿದ ಐವರು ಉಗ್ರರನ್ನು ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ಬಂಧಿಸಲಾಗಿದೆ.

      ಉಗ್ರರನ್ನು ಸದರ್ಬಲ್ ಹಜರತ್‌ಬಾಲ್‌ನ ಐಜಾಜ್ ಅಹ್ಮದ್ ಶೇಖ್, ಹಜಾರತ್ ಬಾಲ್ ಅಸಾರ್ ಕಾಲೋನಿಯ ಉಮರ್ ಹಮೀದ್ ಶೇಖ್, ಇಮ್ತಿಯಾಜ್ ಅಹ್ಮದ್, ಎಲ್ಲಹಿಬಾಗ್ ಸೌರಾದ ಶಹೀಲ್ ಫಾರೂಖ್ ಗೊಜ್ರಿ ಮತ್ತು ಸದರ್ ಬಲ್ ಹಜಾರತ್ ಬಾಲ್ ನ ನಸೀರ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದೆ.

      ಈ ಉಗ್ರರಿಂದ 143 ಗೆಲಾಟಿನ್ ಕಡ್ಡಿಗಳು, 7 ಸ್ಫೋಟಕಗಳು, 01 ಸೈಲೆನ್ಸರ್ಸ್, 42 ಡಿಟೊನೆಟರ್ಸ್, ವಾಕಿ ಟಾಕಿ, ಸಿಡಿ ಡ್ರೈವ್, ಬ್ಯಾಟರಿಗಳು, ಬ್ಯಾಟರಿ ಚಾರ್ಜರ್, ನ್ಯೂಟ್ರಿಕ್ ಆಸಿಡ್ ಬಾಟಲ್ ಸೇರಿದಂತೆ ಭಾರಿ ಪ್ರಮಾಣದ ಸ್ಪೋಟಕ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

      ಗಣರಾಜ್ಯೋತ್ಸವಕ್ಕೆ ಕೆಲ ದಿನಗಳಷ್ಟೇ ಬಾಕಿ ಇದ್ದು, ಹಜಾರತ್ ಬಾಲ್ ಪ್ರದೇಶದಲ್ಲಿ ಎರಡು ಗ್ರೆನೇಡ್ ಸ್ಫೋಟವಾಗಿದ್ದು, ಜೈಷ್ -ಇ- ಮೊಹಮ್ಮದ್ ಸಂಘಟನೆಯ ಸಂಚನ್ನು ಬೇಧಿಸುವಲ್ಲಿ ಶ್ರೀನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap