ಬೆಂಗಳೂರು:
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ಜನವರಿ 18) ಮುಕ್ತಾಯಗೊಂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್-3 ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ರಾಜಸ್ಥಾನದ ಎದುರು 6 ವಿಕೆಟ್ ಗೆಲುವು ಸಾಧಿಸುವ ಮೂಲಕ ಸೆಮಿ ಫೈನಲ್‌ಗೆ ಪ್ರವೇಶಿಸಿದೆ.
ನಾಯಕ ಮನೀಶ್ ಪಾಂಡೆ(ಔಟಾಗದೆ 87) ಹಾಗೂ ಕರುಣ್ ನಾಯರ್(ಔಟಾಗದೆ 61)ಅರ್ಧಶತಕದ ಕೊಡುಗೆ ಬೆಂಬಲದಿಂದ ಆತಿಥೇಯ ಕರ್ನಾಟಕ ತಂಡ ರಾಜಸ್ಥಾನವನ್ನು ಆರು ವಿಕೆಟ್‌ಗಳಿಂದ ಮಣಿಸಿ ರಣಜಿ ಟ್ರೋಫಿಯಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದೆ.
ಕರ್ನಾಟಕದ ಮೊದಲ ಇನ್ನಿಂಗ್ಸ್‌ನಲ್ಲಿ ವಿನಯ್ ಕುಮಾರ್ ಅಜೇಯ ಅರ್ಧಶತಕ ( 83 ರನ್) ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್ 52 ರನ್ ನೆರವಾದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕರುಣ್ ನಾಯರ್ 61 ರನ್ ಮತ್ತು ನಾಯಕ ಮನೀಶ್ ಪಾಂಡೆ 87 ರನ್ ಬೆಂಬಲ ತಂಡಕ್ಕೆ ಗೆಲುವು ತಂದಿತು.
ಕರ್ನಾಟಕದ ವಿಜಯ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಕೃಷ್ಣಪ್ಪ ಗೌತಮ್ 3+4, ಅಭಿಮನ್ಯು ಮಿಥುನ್ 3+2, ಶ್ರೇಯಸ್ ಗೋಪಾಲ್ 2+3 ವಿಕೆಟ್ ಪಡೆಯುವ ಮೂಲಕ ರಾಜ್ಯ ತಂಡದ ಪರ ಮಿಂಚಿದರು. ಎದುರಾಳಿ ಪರ ರಾಹುಲ್ ಚಾಹರ್ ಕರ್ನಾಟಕದ ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 5 ವಿಕೆಟ್ ಉರುಳಿಸಿ ಗಮನ ಸೆಳೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
