ಬೆಂಗಳೂರು:
ಸೂಪರ್ ಸ್ಟಾರ್ ರಜನಿಕಾಂತ್ ಅವರು ನಟ ಅಭಿಷೇಕ್ ಅಭಿನಯದ ಚೊಚ್ಚಲ ‘ಅಮರ್’ ಚಿತ್ರಕ್ಕೆ ಶುಭ ಕೋರಿದ್ದಾರೆ.
ರಜನಿಕಾಂತ್ ಅವರು ವಿಡಿಯೋದಲ್ಲಿ ಅಮರ್ ಚಿತ್ರ ಯಶಸ್ಸು ಕಾಣಲಿ ಎಂದು ಹೇಳಿ ಅಭಿಷೇಕ್ ಅವರಿಗೆ ಶುಭ ಹಾರೈಸಿದ್ದಾರೆ. ಹಾಗೆಯೇ ಮಂಡ್ಯದಲ್ಲಿ ಬುಧವಾರ ನಡೆದ ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ದರ್ಶನ್ ಅವರು ಕೂಡ ಶುಭ ಕೋರಿದ್ದಾರೆ.
— sumalatha ambareesh ?? (@sumalathaA) May 30, 2019
ನನ್ನ ಆತ್ಮೀಯ ಗೆಳೆಯ ಅಂಬರೀಶ್ ಹಾಗೂ ನನ್ನ ಸಹೋದರಿ ಸುಮಲತಾ ಅವರ ಪುತ್ರ ಅಭಿಷೇಕ್ ನಟಿಸಿದ ‘ಅಮರ್’ ಚಿತ್ರ ದೊಡ್ಡ ಯಶಸ್ಸು ಗಳಿಸಲಿ. ಅಂಬರೀಶ್ ಹೇಗೆ ಕನ್ನಡ ಜನಗಳ ಹೃದಯಲ್ಲಿ ವಿಜೃಂಭಿಸಿದ್ದನೋ, ಹಾಗೆ ಅಭಿಷೇಕ್ ಕೂಡ ಚಿತ್ರರಂಗದಲ್ಲಿ ಹಾಗೂ ಕನ್ನಡ ಜನರ ಹೃದಯದಲ್ಲಿ ವಿಜೃಂಭಸಲಿ ಎಂದು ದೇವರ ಬಳಿ ಪ್ರಾಥಿಸುತ್ತೇನೆ ಎಂದು ರಜನಿಕಾಂತ್ ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
