6 ತಿಂಗಳ ಬಳಿಕ ತಾಜ್’ ಮಹಲ್ ವೀಕ್ಷಣೆಗೆ ಅವಕಾಶ!!!

ಆಗ್ರಾ :

    ಲಾಕ್’ಡೌನ್ ಹಿನ್ನೆಲೆ ಕಳೆದ 6 ತಿಂಗಳಿನಿಂದ ಮುಚ್ಚಿದ್ದ ಆಗ್ರಾದ ತಾಜ್ ಮಹಲ್ ನೋಡಲು ಪ್ರವಾಸಿಗರಿಗೆ ಇಂದಿನಿಂದ ಮತ್ತೆ ಸಾರ್ವಜನಿಕರಿಗೆ ಮುಕ್ತವಾಗಲಿದೆ.

     ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ತಾಜ್ ಮಹಲ್ ಅನ್ನು ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಬಳಿಕ ಸತತ ಆರು ತಿಂಗಳ ಬಳಿಕ ಅಂದರೆ ಸೆಪ್ಟೆಂಬರ್ 1ರಿಂದ ಕೇಂದ್ರ ಸರ್ಕಾರ ತಾಜ್ ಮಹಲ್ ಹೊರತು ಪಡಿಸಿ ಎಲ್ಲಾ ಸ್ಮಾರಕಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿತ್ತು. 

     ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳ ಪ್ರವೇಶ ಮುಕ್ತವಾಗಿದೆ. ತಾಜ್ ಮಹಲ್ ಅನ್ನೂ ಕೂಡ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.

File photo: Workers spray disinfection at Taj Mahal premises it re-opens from September 21.

     ಆದರೆ ಈಗಲೂ ಕೊರೊನಾ ಹರಡುವಿಕೆ ನಿಲ್ಲದ ಕಾರಣ ದಿನವೊಂದಕ್ಕೆ ಕೇವಲ 5 ಸಾವಿರ ಪ್ರವಾಸಿಗರಿಗೆ ಮಾತ್ರ ತಾಜಮಹಲ್ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ. ಅಲ್ಲದೆ ಆಗ್ರಾ ಕೋಟೆಗೆ ದಿನವೊಂದಕ್ಕೆ 2,500 ಪ್ರವಾಸಿಗರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

     ಕೊರೋನಾ ಹರಡುವಿಕೆ ಈಗಲೂ ಕಡಿಮೆಯಾಗದ ಕಾರಣದಿಂದ ಪ್ರವಾಸಿಗರಿಗೆ ಈಗ ಎಲೆಕ್ಟ್ರಾನಿಕ್ ಟಿಕೆಟ್ ನೀಡಲಾಗುವುದು. ಆವರಣದೊಳಗೆ ಪರವಾನಗಿ ಪಡೆದ ಮಾರ್ಗದರ್ಶಿಗಳನ್ನು ಮಾತ್ರ ಅನುಮತಿಸಲಾಗುವುದು.

     ಪ್ರವಾಸಿಗರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಪ್ರವಾಸಿಗರು  ಫೋಟೋ ಕ್ಲಿಕ್ಕಿಸಲು 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಸೋಲೋ ಫೋಟೋಗಳಿಗೆ ಪೋಸ್ ನೀಡಲು ಅನುಮತಿ ನೀಡಲಾಗಿದೆ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link