ಬೆಳ್ಳಂಬೆಳಗ್ಗೆಯೇ ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಕ್ಕಾಗಿ ಬೆಟ್ಟ ಏರಿ ಬಂದರು. ನೀಲಿಮಾಲಾ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅವರನ್ನು ತಡೆದು ನಿಲ್ಲಿಸಿದರು. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ದೇಗುಲ ಪ್ರವೇಶಕ್ಕೆ ಯತ್ನಿಸಿದ ಮಹಿಳೆಯರಿಗೆ ರಕ್ಷಣೆ ನೀಡಿದರು.

ಸದ್ಯ ನೀಲಿಮಾಲಾ ಬಳಿ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಿಳೆಯರು ತಾವು ಅಯ್ಯಪ್ಪನ ದರ್ಶನ ಪಡೆಯಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ನೀಲಿಮಾಲಾದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈಚೆಗೆ ಬಿಂದು ಹಾಗೂ ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ಶಬರಿಮಲೆಯ ಅಯ್ಯಪ್ಪನ ಗುಡಿ ಪ್ರವೇಶಿಸಿದ್ದರು. ಮಹಿಳೆಯೊಬ್ಬರು ವಯಸ್ಸಾದವರಂತೆ ಮೇಕಪ್ ಮಾಡಿಕೊಂಡು ಶಬರಿಮಲೆ ಪ್ರವೇಶಿಸಿದ್ದಾಗಿ ಫೇಸ್ಬುಕ್ನಲ್ಲಿ ಹೇಳಿದ್ದರು.
