ದೆಹಲಿ:
ಪುಲ್ವಾಮದ ಅವಂತಿಪೋರದಲ್ಲಿ ನಿನ್ನೆ ನಡೆದ ಉಗ್ರರ ದಾಳಿಯ ಬಗ್ಗೆ ಪ್ರತಿಯೊಬ್ಬ ನಾಗರಿಕನೂ ಅತಿ ಉಗ್ರವಾಗಿ ಖಂಡಿಸುತ್ತಿದ್ದು, ಭಯೋತ್ಪಾದಕರನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮೌನಾಚರಣೆಯ ಸಂದೇಶ ರವಾನೆಯಾಗಿದ್ದು, ಉಗ್ರರ ದಾಳಿಯಿಂದ ಹುತಾತ್ಮರಾಗಿರುವ 44 ಮಂದಿ ಸಿಆರ್‍ಪಿಎಫ್ ಯೋಧರ ಆತ್ಮಕ್ಕೆ ಶಾಂತಿ ಕೋರಲು ಇಂದು ಮಧ್ಯಾಹ್ನ 3.15ಕ್ಕೆ ದೇಶಾದ್ಯಂತ 2 ನಿಮಿಷಗಳ ಮೌನಾಚರಣೆಗೆ ಕರೆ ನೀಡಲಾಗಿದೆ.
ಶಾಲಾ-ಕಾಲೇಜು, ಕಚೇರಿ, ಅಂಗಡಿ, ಶಾಪಿಂಗ್‍ಮಾಲ್, ಸಿನಿಮಾ ಮಂದಿರಗಳು ಎಲ್ಲೇ ಇದ್ದರೂ ತಾವಿದ್ದ ಸ್ಥಳದಲ್ಲೇ ಎರಡು ನಿಮಿಷ ಮೌನಾಚರಣೆ ಮಾಡಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ