ಬೆಂಗಳೂರು
ಮಹಾತ್ಮ ಗಾಂಧೀಜಿಯ 150ನೇ ಜನ್ಮದಿನಾಚರಣೆ ಅಂಗವಾಗಿ ಮಹತ್ವ ಹೆಜ್ಜೆ ಇಟ್ಟಿರುವ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ಸಿನಲ್ಲಿ ಪ್ರಯಾಣಿಕರಿಗೆ ನೀಡುತ್ತಿದ್ದ ಪ್ಲಾಸ್ಟಿಕ್ ನೀರಿನ ಬಾಟಲ್‍ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕೆಎಸ್‍ಆರ್‍ಟಿಸಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಹಾತ್ಮ ಗಾಂಧೀಜಿಯ 150ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸ್ವಚ್ಛತೆಯೇ ಸೇವೆ ಅಭಿಯಾನದಲ್ಲಿ ವ್ಯವಸ್ಥಾಪಕ ನಿರ್ದೇಶಕ .
ಶಿವಯೋಗಿ ಸಿ.ಕಳಸದ ಅವರು ಪಾಲ್ಗೊಂಡು ನಿಲ್ದಾಣಗಳಲ್ಲಿ ಬಳಸಿ ಬಿಡಾಸಿದ ಪ್ಲಾಸ್ಟಿಕ್ ಬಾಟಲ್‍ಗಳನ್ನು ಸಂಗ್ರಹಿಸಿ ಜಾಗೃತಿ ಮೂಡಿಸಿ, ಪ್ಲಾಸ್ಟಿಕ್ ನೀರಿನ ಬಾಟಲ್ ಬಳಕೆಗೆ ಕಡಿವಾಣ ಹಾಕಿದ್ದಾರೆ. ನಿಗಮದಲ್ಲಿರುವ ಒಟ್ಟು 8800 ಬಸ್ಸುಗಳಲ್ಲಿ, 300 ಪ್ರತಿಷ್ಠಿತ ಸೇವೆಯ ಬಸ್ಸುಗಳಲ್ಲಿ ಮಾತ್ರ ಕುಡಿಯುವ ನೀರಿನ ಬಾಟಲ್‍ಗಳನ್ನು ವಿತರಿಸಲಾಗುತ್ತಿದ್ದು, ಇತರೆ ಮೂರು ನಿಗಮಗಳು ಸೇರಿ ಸುಮಾರು 450 ಬಸ್ಸುಗಳಲ್ಲಿ ಪ್ರತಿವರ್ಷ ನಿಗಮವು 1.20 ಕೋಟಿ ಬಾಟಲ್‍ಗಳನ್ನು ಪ್ರಯಾಣಿಕರಿಗೆ ವಿತರಿಸುತ್ತಿದ್ದು, ಇಷ್ಟು ದಿನ ಅಗಾಧವಾದ ಬಳಸಿ ಬಿಡಾಸಿದ ಬಾಟಲ್‍ಗಳು ಭೂಮಿಯ ಒಡಲು ಸೇರುತ್ತಿದೆ.
ಈ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿಯು ನೀರಿನ ಬಾಟಲಿಗಳನ್ನು ರದ್ದುಗೊಳಿಸಿ, ಪರಿಸರ ಕಾಳಜಿಗೆ ಮುಂದಾಗಿದೆ. ಪ್ರಯಾಣಿಕರು ಕುಡಿಯುವ ನೀರಿನ ಬಾಟಲಿಗಳನ್ನು ಸ್ವತಃ ತಾವೇ ತರುವಂತೆ ಆದೇಶ ಹೊರಡಿಸುತ್ತಿದ್ದು, ಈ ಬಗ್ಗೆ ಆನ್‍ಲೈನ್ ಟಿಕೆಟ್‍ನಲ್ಲಿ ಮುದ್ರಿಸುವುದಲ್ಲದೇ ಕೆಎಸ್‍ಆರ್‍ಟಿಸಿಯ ಜಾಲತಾಣಗಳ ಸೇರಿದಂತೆ ಎಲ್ಲೆಡೆ ಪ್ರಕಟಿಸಿ ಜಾಗೃತಿ ಮೂಡಿಸಲಾಗುತ್ತಿದೆ.
ಕೆಎಸ್‍ಆರ್‍ಟಿಸಿಯಿಂದ ಸೆಲ್ಫಿ ಸ್ಫರ್ಧೆ ಈ ಅಭಿಯಾನದ ಅಂಗವಾಗಿ ಕೆಎಸ್‍ಆರ್‍ಟಿಸಿ ಸೆಲ್ಫಿ ವಿತ್ ಮೈ ಓನ್ ಬಾಟಲ್ ಎಂಬ ಸೆಲ್ಫಿ ಸ್ಫರ್ಧೆಯನ್ನು ಆಯೋಜಿಸಿದೆ. ಪ್ರಯಾಣಿಕರು ನಿಗಮದ ಪ್ರೀಮಿಯಮ್ ಬಸ್ಸಿನಲ್ಲಿ ತಮ್ಮ ನೀರಿನ ಬಾಟೆಲ್‍ನ ಜೊತೆ ಸೆಲ್ಫಿ ತೆಗೆದು ಪೋಸ್ಟ್ ಮಾಡಬೇಕು. ವಿಜೇತರಿಗೆ ಕೆಎಸ್‍ಆರ್‍ಟಿಸಿಯ ಪ್ರೀಮಿಯಮ್ ಬಸ್ಸಿನಲ್ಲಿ ಒಂದು ಮಾರ್ಗದಲ್ಲಿ ಉಚಿತ ಪ್ರಯಾಣದ ಸೌಲಭ್ಯ ನೀಡಲಾಗುವುದು. ಸ್ವ ಚ್ಛತೆ ಕಾಪಾಡುವ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಗೆ ಸಾರಿಗೆ ಸ್ವಚ್ಛತಾ ಪ್ರಶಸ್ತಿ ಮತ್ತು ಸಾರಿಗೆ ಪರಿಸರ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಪ್ರೀಮಿಯಮ್ ಬಸ್ಸಿನಲ್ಲಿ ಕಸದ ಚೀಲವನ್ನು ಇಡುವ ವ್ಯವಸ್ಥೆ, ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಸ್ಯಾನಿಟರಿ ಕುರಿತ ಮಿಷನ್‍ನ್ನು ಅಳವಡಿಸಿ ಸ್ವಚ್ಚತೆಗೆ ಆದ್ಯತೆ ನೀಡಲು ಮುಂದಾಗಿದೆ. ಕಾರ್ಯಕ್ರಮದಲ್ಲಿ ನಿಗಮದ ಕವಿತಾ ಎಸ್. ಮನ್ನಿಕೇರಿ, .ಉರ್ಮಿಳಾ ಕಳಸದ,ಇಂಡಿಯಾ ಪ್ಲಾಗ್ ರನ್‍ನ ಶೋಭಾ ರಾಂದೆರ್ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ