ತಿರುಪತಿ ಲಡ್ಡು ಮಾರಾಟ ಶುರು : ಶೇ.50% ರಿಯಾಯಿತಿ!!

ತಿರುಪತಿ:

      ಕೋವಿಡ್-19ದಿಂದಾಗಿ ಲಡ್ಡು ಮಾರಾಟವನ್ನು ನಿಲ್ಲಿಸಿದ್ದ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಇದೀಗ ಪ್ರಸಾದ ಲಡ್ಡು ಮಾರಾಟಕ್ಕೆ ಅನುಮತಿ ನೀಡಿದೆ.

     ಮಾ 20ರಂದು ದೇವಸ್ಥಾನವು ಇತಿಹಾಸದಲ್ಲೇ ಮೊದಲ ಬಾರಿಗೆ ಬಾಗಿಲು ಮುಚ್ಚಿತ್ತು. ಇದೀಗ ಲಾಕ್‌ ಡೌನ್‌ ನಿಯಮ ಸಡಿಲವಾಗಿರುವ ಹಿನ್ನೆಲೆಯಲ್ಲಿ ತಿರುಪತಿ ಲಡ್ಡು ಪ್ರಸಾದ ಶೇ.50ರಷ್ಟು ರಿಯಾಯಿತಿ ದರದಲ್ಲಿ ಭಕ್ತಾದಿಗಳಿಗೆ ಲಭ್ಯವಾಗಲಿದೆ. 

      ಬೆಂಗಳೂರು, ಹೈದರಾಬಾದ್‌, ಚೆನ್ನೈ ಮತ್ತು ಆಂಧ್ರಪ್ರದೇಶದ 13 ಜಿಲ್ಲಾ ಕೇಂದ್ರಗಳಲ್ಲಿ ಮೇ 25ರಿಂದ ತಿರುಪತಿ ಲಡ್ಡು ಮಾರಾಟ ನಡೆಯಲಿದೆ. ಲಾಕ್‌ಡೌನ್‌ ಪಿರಿಯಡ್‌ ಮುಗಿಯುವವರೆಗೆ ಹಾಗೂ ತಿರುಮಲೆಯಲ್ಲಿ ಶ್ರೀವಾರಿ ದರ್ಶನ ಪ್ರಾರಂಭವವಾಗುವವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ  ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. 

       ಆಸಕ್ತರು ಜಾಲತಾಣ https:/tirupatibalaji.ap.gov.in ಲಾಗ್‌ಇನ್‌ ಆಗಿ ವಿವಿಧ ಸೇವಾ ಟಿಕೆಟ್‌ಗಳನ್ನು ಮುಂಗಡವಾಗಿ ಕೊಳ್ಳಬಹುದು. ಅಥವಾ ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆಗಳಾದ 18004254141 ಅಥವಾ 1800425333333ಗೆ ಕರೆ ಮಾಡಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap